ಪ.ಬಂಗಾಳಕ್ಕೆ ಹೆಚ್ಚು ಆಮ್ಲಜನಕದ ಅಗತ್ಯವಿದೆ: ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಪತ್ರ

Update: 2021-05-07 15:54 GMT

ಕೋಲ್ಕತಾ,ಮೇ 7: ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿರುವ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು,ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚಳದೊಂದಿಗೆ ರಾಜ್ಯದಲ್ಲಿ ಆಮ್ಲಜನಕ ಅಗತ್ಯವೂ ಏರುತ್ತಿದೆ ಮತ್ತು ಇಂತಹ ಸಮಯದಲ್ಲಿ ಕೇಂದ್ರವು ಆಮ್ಲಜನಕ ಪೂರೈಕೆಯಲ್ಲಿ ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

ಕಳೆದೊಂದು ವಾರದಲ್ಲಿ ಬಂಗಾಳದ ದೈನಂದಿನ ಆಮ್ಲಜನಕ ಅಗತ್ಯವು 470 ಮೆ.ಟ.ಗಳಿಂದ 550 ಮೆ.ಟ.ಗಳಿಗೆ ಏರಿಕೆಯಾಗಿದೆ. ರಾಜ್ಯಕ್ಕೆ ಈಗ ಪ್ರತಿದಿನ 550 ಮೆ.ಟ.ವೈದ್ಯಕೀಯ ಆಮ್ಲಜನಕ ಅಗತ್ಯವಿದೆ ಎಂಬ ವಿಷಯವನ್ನು ತನ್ನ ಸರಕಾರವು ಈಗಾಗಲೇ ಕೇಂದ್ರದ ಗಮನಕ್ಕೆ ತಂದಿದೆ. 

ಆದರೆ ಪ.ಬಂಗಾಳದ ಅಗತ್ಯಕ್ಕನುಗುಣವಾಗಿ 550 ಮೆ.ಟ.ಆಮ್ಲಜನಕವನ್ನು ಹಂಚಿಕೆ ಮಾಡುವ ಬದಲು ಕೇಂದ್ರವು ಕಳೆದ 10 ದಿನಗಳಿಂದ ಪ.ಬಂಗಾಳದಲ್ಲಿ ಉತ್ಪಾದನೆಯಾಗುವ ಆಮ್ಲಜನಕದಲ್ಲಿ ಇತರ ರಾಜ್ಯಗಳಿಗೆ ಹಂಚಿಕೆಯನ್ನು 230 ಮೆ.ಟ.ಗಳಿಂದ 360 ಮೆ.ಟ.ಗಳಿಗೆ ಹೆಚ್ಚಿಸಿದೆ ಮತ್ತು ಪ.ಬಂಗಾಳದ ದೈನಂದಿನ ಅಗತ್ಯ 550 ಮೆ.ಟ.ಗಳಾಗಿದ್ದರೂ ಅದು 308 ಮೆ.ಟ.ಗೆ ಸ್ಥಿರಗೊಂಡಿದೆ ಎಂದು ಬ್ಯಾನರ್ಜಿ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News