ತಮಿಳುನಾಡಿನಲ್ಲಿ ಎರಡು ವಾರ ಸಂಪೂರ್ಣ ಲಾಕ್ ಡೌನ್

Update: 2021-05-08 05:28 GMT

ಹೊಸದಿಲ್ಲಿ: ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ತಮಿಳುನಾಡು ಸರಕಾರ ಮೇ 10 ರಿಂದ ಎರಡು ವಾರಗಳ  ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.

"ಅನಿವಾರ್ಯ ಕಾರಣಗಳಿಂದಾಗಿ" ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ವೈದ್ಯಕೀಯ ತಜ್ಞರೊಂದಿಗಿನ ಸಮಾಲೋಚನೆಗಳಲ್ಲದೆ, ಶುಕ್ರವಾರ ಜಿಲ್ಲಾಧಿಕಾರಿ ಗಳೊಂದಿಗೆ ಅವರು ನಡೆಸಿದ ಪರಿಶೀಲನಾ ಸಭೆಯಲ್ಲಿ ಸ್ವೀಕರಿಸಿದ ಸಲಹೆಯ  ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಟಾಲಿನ್ ಹೇಳಿದರು.

ಸಂಪೂರ್ಣ ಲಾಕ್‌ಡೌನ್ ಅನ್ನು ಮೇ 10 ರಂದು ಬೆಳಿಗ್ಗೆ 4 ರಿಂದ ಮೇ 24 ರಂದು ಬೆಳಿಗ್ಗೆ 4 ರವರೆಗೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಲಾಕ್‌ಡೌನ್ ಸಮಯದಲ್ಲಿ ಬ್ಯಾಂಕುಗಳು (ಶೇಕಡಾ 50 ಸಿಬ್ಬಂದಿ) ಹಾಗೂ  ಪಡಿತರ ಅಂಗಡಿಗಳು. ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್ ಗೆ  ಅನುಮತಿಸಲಾಗುತ್ತದೆ.

ಆಸ್ಪತ್ರೆ ಅಥವಾ ವಿವಾಹ / ಅಂತ್ಯಕ್ರಿಯೆಯ ಕೆಲಸಗಳನ್ನು ಹೊರತುಪಡಿಸಿ ಯಾವುದೇ ಕ್ಯಾಬ್‌ಗಳು ಅಥವಾ ಆಟೋರಿಕ್ಷಾಗಳು ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಿನ್ನೆ ಪ್ರಮಾಣವಚನ ಸ್ವೀಕರಿಸಿದ ಬೆನ್ನಿಗೆ ಲಾಕ್ ಡೌನ್ ನಿರ್ಧಾರವು  ಸ್ಟಾಲಿನ್ ತೆಗೆದುಕೊಂಡ ಮೊದಲ ಪ್ರಮುಖ ನಿರ್ಧಾರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News