ಕೆಕೆಆರ್ ವೇಗಿ ಪ್ರಸಿದ್ಧ್ ಕೃಷ್ಣಗೆ ಕೋವಿಡ್-19 ದೃಢ

Update: 2021-05-08 11:03 GMT

ಹೊಸದಿಲ್ಲಿ:  ಕೋಲ್ಕತಾ ನೈಟ್ ರೈಡರ್ಸ್ ಹಾಗೂ  ಭಾರತದ ವೇಗದ ಬೌಲರ್  ಪ್ರಸಿದ್ಧ್  ಕೃಷ್ಣ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.  ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಹಾಗೂ  ಟಿಮ್ ಸೀಫರ್ಟ್ ಬಳಿಕ ಕೊರೋನ ಸೋಂಕಿಗೆ ಒಳಗಾದ ಕೆಕೆಆರ್ ನ  ನಾಲ್ಕನೇ ಆಟಗಾರರಾಗಿದ್ದಾರೆ.

ಕೃಷ್ಣ ಅವರಿಗೆ  ಕೋವಿಡ್-19  ಪರೀಕ್ಷೆಗೆ ಒಳಗಾಗಿದ್ದು, ಫಲಿತಾಂಶಗಳು ಬಂದಿವೆ ಹಾಗೂ  ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಮುಂಬರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯ ಹಾಗೂ  ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಶುಕ್ರವಾರ ಪ್ರಸಿದ್ದ್ ಕೃಷ್ಣ  ಅವರನ್ನು ಮೀಸಲು  ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು

ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಮಂಗಳವಾರ ಬೆಳಿಗ್ಗೆ ಕೋವಿಡ್  ಸೋಂಕು ದೃಢಪಟ್ಟಿತ್ತು. ಆಟಗಾರರಿಗೆ ಕೋವಿಡ್ ಸೋಂಕು ತಗಲಿದ ಪ್ರಕರಣ ಹೆಚ್ಚಾದ ನಂತರ 14 ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು  ಮುಂದೂಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News