ಲಸಿಕೆ ವಿಚಾರದಲ್ಲಿ ನ್ಯಾಯಾಂಗದ ಹಸ್ತಕ್ಷೇಪದ ಅಗತ್ಯವಿಲ್ಲ: ಸುಪ್ರೀಂಗೆ ಕೇಂದ್ರ ಸರಕಾರ

Update: 2021-05-10 06:41 GMT

ಹೊಸದಿಲ್ಲಿ: ಕೇಂದ್ರ ಸರಕಾರದ ಲಸಿಕೆ ನೀತಿಗಳ ಕುರಿತಾದಂತೆ ಸುಪ್ರೀಂ ಕೋರ್ಟ್‌ ಆಲಿಸುತ್ತಿದ್ದು, ನ್ಯಾಯಾಲಯದ ಸರ್ವರ್‌ ನಲ್ಲಿಯ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮುಂದೂಡಲಾಗಿದೆ. ರವಿವಾರ ರಾತ್ರಿ ಕೇಂದ್ರ ಸರಕಾರದ ಲಸಿಕಾ ನೀತಿ, ವಿಭಿನ್ನ ದರ ನಿಗದಿ, ಲಸಿಕೆಗಳ ಕೊರತೆ ಮತ್ತು ನಿಧಾನಗತಿಯ ಲಸಿಕಾ ಅಭಿಯಾನದ ಕುರಿತು ಅಫಿಡವಿಟ್‌ ಸಲ್ಲಿಸಿದ್ದು, ಸರಕಾರವು ತನ್ನ ಲಸಿಕಾ ನೀತಿಯನ್ನು ಸಮರ್ಥಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಲಸಿಕಾ ನೀತಿಯ ಕುರಿತಾದಂತೆ ನ್ಯಾಯಾಂಗದ ಹಸ್ತಕ್ಷೇಪವನ್ನು ಕೇಂಧ್ರ ಸರಕಾರವು ವಿರೋಧಿಸಿದ್ದು, ಇದರಲ್ಲಿ ಉತ್ತಮ ಅರ್ಥಗಳಿದ್ದರೂ ಸಹ ನ್ಯಾಯಾಂಗದ ಹಸ್ತಕ್ಷೇಪವು ಕೆಲ ಅನಿರೀಕ್ಷಿತ ಮತ್ತು ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರಕಾರ ಉಲ್ಲೇಖಿಸಿದೆ.

"ಇದೊಂದು ಜಾಗತಿಕ ಸಾಂಕ್ರಾಮಿಕವಾಗಿದ್ದು, ಈ ಸಂದರ್ಭದಲ್ಲಿ ತಜ್ಞರ ವೈದ್ಯಕೀಯ ಮತ್ತು ವೈಕ್ಞಾನಿಕ ಅಭಿಪ್ರಾಯಗಳನ್ನು ಪಡೆದುಕೊಂಡೇ ದೇಶದ ಕಾರ್ಯತಂತ್ರಗಳನ್ನು ನಡೆಸಲಾಗುತ್ತಿದೆ. ನ್ಯಾಯಾಂಗ ಹಸ್ತಕ್ಷೇಪಕ್ಕೆ ಸಣ್ಣ ಅವಕಾಶವಿದೆ. ಆದರೆ, ಈ ನ್ಯಾಯಾಂಗ ಹಸ್ತಕ್ಷೇಪವು ಅನಿರೀಕ್ಷಿತ ಮತ್ತು ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು. ಸದ್ಯ ತಜ್ಞರ ಸಲಹೆ, ಆಡಳಿತಾತ್ಮಕ ಅನುಭವವಿರುವವರು, ವಿಜ್ಞಾನಿಗಳ ಸಲಹೆಗಳ ಕೊರತೆ ಎದುರಾದರೆ ಮಾತ್ರ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಸಣ್ಣಮಟ್ಟದ ಅವಕಾಶವಿದೆ" ಎಂದು ಕೇಂದ್ರ ಸರಕಾರ ಹೇಳಿದ್ದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News