ಕ್ರಿಕೆಟಿಗ ಪಿಯೂಷ್ ಚಾವ್ಲಾ ತಂದೆ ಕೋವಿಡ್-19 ನಿಂದ ನಿಧನ

Update: 2021-05-10 08:29 GMT

ಹೊಸದಿಲ್ಲಿ: ಭಾರತದ ಕ್ರಿಕೆಟಿಗ ಪಿಯೂಷ್ ಚಾವ್ಲಾ ಅವರ ತಂದೆ ಕೊರೋನಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಸೋಮವಾರ ನಿಧನರಾಗಿದ್ದಾರೆ.

“ನನ್ನ ಪ್ರೀತಿಯ ತಂದೆ ಪ್ರಮೋದ್ ಕುಮಾರ್ ಚಾವ್ಲಾ ಅವರು 2021 ಮೇ 10 ರಂದು ನಿಧನರಾಗಿದ್ದಾರೆ ಎಂದು ನಾವು ಘೋಷಿಸುತಿದ್ದೇವೆ. ಅವರು ಕೋವಿಡ್ ಮತ್ತು ಕೋವಿಡ್ ಬಳಿಕದ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಕಷ್ಟದ ಸಮಯದಲ್ಲಿ ನಿಮ್ಮ  ಪ್ರಾರ್ಥನೆಗಳನ್ನು ನಾವು ಆಹ್ವಾನಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ "ಎಂದು ಪಿಯೂಷ್ ಚಾವ್ಲಾ ತನ್ನ ತಂದೆಯ ಚಿತ್ರದೊಂದಿಗೆ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಿಯೂಷ್ ಚಾವ್ಲಾ ಅವರು ಈ ಬಾರಿ ಮುಂದೂಡಲ್ಪಟ್ಟಿರುವ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು.  ಫೆಬ್ರವರಿ 2021ರಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ 2.40 ಕೋ.ರೂ.ಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದರು.

ಆದರೆ ಈ ವರ್ಷ ಮುಂಬೈ ಆಡಿರುವ 7 ಐಪಿಎಲ್ ಪಂದ್ಯಗಳಲ್ಲಿ ಲೆಗ್ ಸ್ಪಿನ್ನರ್ ಚಾವ್ಲಾ ಆಡುವ ಅವಕಾಶ ಪಡೆದಿರಲಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News