ಭಾರತೀಯ ವೈದ್ಯಕೀಯ ಸಂಘದ ಮಾಜಿ ಮುಖ್ಯಸ್ಥ ಡಾ.ಕೆ.ಕೆ. ಅಗರ್‌ವಾಲ್ ಕೋವಿಡ್ ನಿಂದ ನಿಧನ

Update: 2021-05-18 05:49 GMT
 ಡಾ.ಕೆ.ಕೆ. ಅಗರ್‌ವಾಲ್ (Twitter)

ಹೊಸದಿಲ್ಲಿ: ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಮಾಜಿ ಅಧ್ಯಕ್ಷ ಹಾಗೂ ದೇಶದ ಪ್ರಮುಖ ವೈದ್ಯರಾದ ಕೆ.ಕೆ. ಅಗರ್‌ವಾಲ್ ಅವರು ಕೊವಿಡ್-19 ನಿಂದಾಗಿ ಸೋಮವಾರ ರಾತ್ರಿ ನಿಧನರಾದರು.

ಪದ್ಮಶ್ರೀ ಪ್ರಶಸ್ತಿ ವಿಜೇತರು ಕಳೆದ ಕೆಲವು ದಿನಗಳಿಂದ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯಲ್ಲಿದ್ದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

62 ವರ್ಷದ ಡಾ. ಅಗರ್‌ವಾಲ್ ಸೋಮವಾರ ರಾತ್ರಿ 11.30 ಕ್ಕೆ ಕೋವಿಡ್ ನೊಂದಿಗಿನ ದೀರ್ಘ ಹೋರಾಟದ ನಂತರ ನಿಧನರಾದರು ಎಂದು ಅವರ  ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ. ಅವರು ಎರಡೂ ಲಸಿಕೆ ಡೋಸನ್ನು ತೆಗೆದುಕೊಂಡಿದ್ದರು.

"ಪದ್ಮಶ್ರೀ ಡಾ.ಕೆ. ಅಗರ್ವಾಲ್ ಅವರು ವೈದ್ಯರಾದಾಗಿನಿಂದಲೂ,ತಮ್ಮ ಜೀವನವನ್ನು ಸಾರ್ವಜನಿಕರ ಕಲ್ಯಾಣಕ್ಕಾಗಿ ಅರ್ಪಿಸಿದ್ದಾರೆ ಹಾಗೂ ಆರೋಗ್ಯ ಜಾಗೃತಿ ಮೂಡಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಸಹ ಅವರು ಜನಸಾಮಾನ್ಯರಿಗೆ ಅರಿವು  ಮೂಡಿಸಲು ನಿರಂತರ ಪ್ರಯತ್ನಗಳನ್ನು ಮಾಡಿದರು ಹಾಗೂ  ಹಲವಾರು ವೀಡಿಯೊಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಮಿಲಿಯನ್ ಜನರು ಮತ್ತು ಅಸಂಖ್ಯಾತ ಜೀವಗಳನ್ನು ಉಳಿಸಿದ್ದಾರೆ" ಎಂದು ಹೇಳಿಕೆ ತಿಳಿಸಿದೆ.

ಹೃದ್ರೋಗ ತಜ್ಞ ಡಾ.ಅಗರ್‌ವಾಲ್ ಅವರು ಹಾರ್ಟ್ ಕೇರ್ ಫೌಂಡೇಶನ್ ಆಫ್ ಇಂಡಿಯಾದ ಮುಖ್ಯಸ್ಥರಾಗಿದ್ದರು. ಅವರಿಗೆ 2010 ರಲ್ಲಿ ಪದ್ಮಶ್ರೀ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News