ಕೋವಿಡ್ ಚಿಕಿತ್ಸಾ ಕ್ರಮದಿಂದ ಪ್ಲಾಸ್ಮಾ ಥೆರಪಿ ಕೈಬಿಟ್ಟ ಭಾರತ ಸರಕಾರ

Update: 2021-05-18 06:52 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್ ಚಿಕಿತ್ಸಾ ವಿಧಾನದಿಂದ ಪ್ಲಾಸ್ಮಾ ಥೆರಪಿಯನ್ನು ಸೋಮವಾರ ಭಾರತ ಸರಕಾರ ಕೈಬಿಟ್ಟಿದೆ. ಏಮ್ಸ್-ಐಸಿಎಂಆರ್ ಕೋವಿಡ್-19 ನ್ಯಾಷನಲ್ ಟಾಸ್ಕ್ ಫೋರ್ಸ್ ಮತ್ತು ಆರೋಗ್ಯ ಸಚಿವಾಲಯ ಈ ನಿರ್ಧಾರ ಕೈಗೊಂಡಿದ್ದು ಪ್ಲಾಸ್ಮಾ ಥೆರಪಿಯಿಂದ ಕೋವಿಡ್ ರೋಗಿಗಳಿಗೆ ಯಾವುದೇ ಪ್ರಯೋಜನವಿಲ್ಲವೆಂದು ಇದರಿಂದ ತಿಳಿಯುತ್ತದೆ.

ಲ್ಯಾನ್ಸೆಟ್ ಮೆಡಿಕಲ್ ಜರ್ನಲ್‍ನಲ್ಲಿ ಪ್ಲಾಸ್ಮಾ ಥೆರಪಿಯಿಂದ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರ ಮೇಲೆ ಉಂಟಾದ ಪರಿಣಾಮಗಳ ಕುರಿತಾದ ರಿಕವರಿ ಟ್ರಯಲ್ ವರದಿ ಪ್ರಕಟವಾದ ಬೆನ್ನಲ್ಲಿ ಈ ನಿರ್ಧಾರ ಹೊರಬಿದ್ದಿದೆ.

ಸಾಮಾನ್ಯ ಚಿಕಿತ್ಸಾ ಕ್ರಮಕ್ಕೆ ಹೋಲಿಸಿದಾಗ ಪ್ಲಾಸ್ಮಾ ಥೆರಪಿ 28 ದಿನಗಳ ಅವಧಿಯಲ್ಲಿನ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಿಲ್ಲ ಎಂದು ಲ್ಯಾನ್ಸೆಟ್‍ನಲ್ಲಿ ಪ್ರಕಟಗೊಂಡ ಅಧ್ಯಯನಾ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News