ಕೋವಿಡ್-19: 2,76,110 ಹೊಸ ಪ್ರಕರಣಗಳು ದಾಖಲು, 4,000ಕ್ಕಿಂತ ಕೆಳಗಿಳಿದ ಸಾವುಗಳ ಸಂಖ್ಯೆ

Update: 2021-05-20 16:24 GMT

ಹೊಸದಿಲ್ಲಿ,ಮೇ 20: ಗುರುವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 2,76,110 ಹೊಸ ಕೋವಿಡ್-10 ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 2,57,72,440ಕ್ಕೇರಿದೆ. ಇದೇ ಅವಧಿಯಲ್ಲಿ 3,874 ಸಾವುಗಳು ಸಂಭವಿಸಿದ್ದು,ಒಟ್ಟು ಸಾವುಗಳ ಸಂಖ್ಯೆ 2,87,122ಕ್ಕೆ ತಲುಪಿದೆ. ನಾಲ್ಕು ದಿನಗಳ ಬಳಿಕ ಇದೇ ಮೊದಲ ಬಾರಿ ಸಾವುಗಳ ಸಂಖ್ಯೆ 4,000ಕ್ಕಿಂತ ಕಡಿಮೆಯಾಗಿದೆ ಎಂಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 31,29,878ಕ್ಕೆ ಇಳಿಕೆಯಾಗಿದ್ದು, ಇದು ಒಟ್ಟು ಪ್ರಕರಣಗಳ ಶೇ.12.24ರಷ್ಟಿದೆ. ರಾಷ್ಟ್ರೀಯ ಕೋವಿಡ್-19 ಚೇತರಿಕೆ ದರವು ಶೇ.86.74ಕ್ಕೆ ಏರಿಕೆಯಾಗಿದೆ.

ಕೋವಿಡ್ನಿಂದ ಗುಣಮುಖರಾದವರ ಸಂಖ್ಯೆ 2,23,55,440ಕ್ಕೆ ಏರಿದ್ದು,ಮರಣ ದರವು ಶೇ.1.11ರಷ್ಟಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಮೇ 19ರವರೆಗೆ ದೇಶಾದ್ಯಂತ 32,23,56,187 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು,ಬುಧವಾರ 20,55,010 ಸ್ಯಾಂಪಲ್ಗಳ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News