×
Ad

ಬ್ರಾಹ್ಮಣ ಪ್ರಾಧ್ಯಾಪಕರ ಅಂತಿಮ ವಿಧಿವಿಧಾನ ಪೂರೈಸಿದ ಸಂಸದ ನಾಸೀರ್ ಹುಸೇನ್

Update: 2021-05-21 16:04 IST
photo: facebook

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರು ಮೇ 5 ರಂದು ಕೋವಿಡ್ -19 ರಿಂದಾಗಿ ನಿಧನರಾಗಿರುವ ಬ್ರಾಹ್ಮಣ ಪ್ರಾಧ್ಯಾಪಕರೊಬ್ಬರ ಅಂತಿಮ ವಿಧಿಗಳನ್ನು ನೆರವೇರಿಸಿದರು.

ಶ್ರೀರಂಗಪಟ್ಟಣದ ಸಮೀಪದ ಪಶ್ಚಿಮವಾಹಿನಿಯಲ್ಲಿ ಮಂಗಳವಾರದಂದು ಹುಸೇನ್ ಅವರು ಪ್ರಾಧ್ಯಾಪಕರ ಭಸ್ಮವನ್ನು ವಿಸರ್ಜಿಸಿದರು.

ಕೋವಿಡ್-19ಗೆ ಬಲಿಯಾಗಿರುವ ಪ್ರೊಫೆಸರ್ ಸಾವಿತ್ರಿ ವಿಶ್ವನಾಥನ್ (80) ಅವರು ಜಪಾನೀಸ್ ಭಾಷೆ, ಇತಿಹಾಸ ಹಾಗೂ ರಾಜಕೀಯದ ಸಂಶೋಧಕರಾಗಿದ್ದು, ದಿಲ್ಲಿ ವಿಶ್ವವಿದ್ಯಾಲಯದ ಚೈನೀಸ್ ಹಾಗೂ  ಜಪಾನೀಸ್ ಅಧ್ಯಯನ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದರು. ಸಾವಿತ್ರಿ ಅವರ ತಂಗಿ ಮಹಾಲಕ್ಷ್ಮಿಆತ್ರೇಯಿ ಅವರು ಮತ್ತೊಂದು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವಾಗ, ಸಯ್ಯದ್  ಅದೇ ದಿನ ವಿಧಿವಿಧಾನ  ನೆರವೇರಿಸಿದರು. ಸಾವಿತ್ರ ಅವರು ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು.

"ಅವರು ನನ್ನ ಕುಟುಂಬ ಸ್ನೇಹಿತರಿಗಿಂತ ಹೆಚ್ಚಾಗಿದ್ದರು. ನನ್ನ ತಾಯಿಯಂತೆಯೇ ಇದ್ದರು" ಎಂದು ಹುಸೇನ್ Times Of India ಗೆ ತಿಳಿಸಿದರು,

"ಅವರ ಕುಟುಂಬವು ಪ್ರಪಂಚದಾದ್ಯಂತ ಹರಡಿಕೊಂಡಿರುವುದರಿಂದ, ಪ್ರಯಾಣದ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಯಾರಿಗೂ  ಬರಲು ಸಾಧ್ಯವಾಗಲಿಲ್ಲ. ನಾನು ಹಿಂದೂ ಅರ್ಚಕರೊಬ್ಬರಿಂದ ಸಲಹೆಗಳನ್ನು ಪಡೆದುಕೊಂಡು ಅಂತಿಮ ವಿಧಿವಿಧಾನವನ್ನು ಮಾಡಿದ್ದೇನೆ. ಸಾವಿತ್ರಿ  ಅವರು ತಮ್ಮ ಪತಿಯಿಂದ  ಬೇರ್ಪಟ್ಟಿದ್ದರು ಹಾಗೂ ಅವರಿಗೆ ಮಕ್ಕಳಿರಲಿಲ್ಲ’’ ಎಂದು ಹುಸೇನ್ ಹೇಳಿದರು.

ಶೈಕ್ಷಣಿಕ ಕಾರ್ಯ ಹಾಗೂ ಮುಂದಿನ ಪೀಳಿಗೆಯ ವಿದ್ವಾಂಸರನ್ನು ಪೋಷಿಸುವ ಮೂಲಕ ಜಪಾನಿನ ಭಾಷಾ ಶಿಕ್ಷಣ ಹಾಗೂ ಜಪಾನೀಸ್ ಅಧ್ಯಯನಗಳ ಅಭಿವೃದ್ಧಿ ಉತ್ತೇಜನಕ್ಕೆ ಸಾವಿತ್ರಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಜಪಾನಿನ ಸರಕಾರವು ಅವರಿಗೆ 1967 ರಲ್ಲಿ ಪ್ರಧಾನ ಮಂತ್ರಿ ಬಹುಮಾನ ಹಾಗೂ  1982 ರಲ್ಲಿ ವಿಸ್ಟೇರಿಯಾದ ಆರ್ಡರ್ ಆಫ್ ದಿ ಪ್ರಿಸಿಯಸ್ ಕ್ರೌನ್ ನೀಡಿ ಗೌರವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News