ರೆಮ್‍ಡೆಸಿವಿರ್ ಅಕ್ರಮ ಮಾರಾಟ: ವೈದ್ಯನ ಬಂಧನ
Update: 2021-05-21 17:33 IST
ಬೆಂಗಳೂರು, ಮೇ 21: ಅಕ್ರಮವಾಗಿ ರೆಮ್‍ಡೆಸಿವಿರ್ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ವೈದ್ಯರೊಬ್ಬರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಾಗಲೂರಿನ ಆಸ್ಪತ್ರೆಯ ವೈದ್ಯ ಡಾ.ಅಜಯ್‍ಕುಮಾರ್ ಯಾದವ್(25) ಎಂದು ಗುರುತಿಸಲಾಗಿದೆ. ಬಂಧಿತನಿಂದ 36 ಸಾವಿರ ಮೌಲ್ಯದ 8 ರೆಮ್‍ಡೆಸಿವಿರ್ ಚುಚ್ಚುಮದ್ದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಚ್‍ಬಿಆರ್ ಲೇಔಟ್‍ನ ಬಿಡಿಎ ಕಾಂಪ್ಲೆಕ್ಸ್ ಬಳಿ ರೆಮ್‍ಡೆಸಿವಿರನ್ನು 11 ಸಾವಿರ ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸೆರೆ ಸಿಕ್ಕಿದ್ದಾನೆ. ಮೊಕದ್ದಮೆ ದಾಖಲಿಸಿಕೊಂಡಿರುವ ಕಾಡುಗೊಂಡನಹಳ್ಳಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.