ಮ್ಯಾಂಗಳೂರು ಮೂಸಾ ಹಾಜಿ

Update: 2021-05-23 10:06 GMT

ಮಂಗಳೂರು, ಮೇ 23: ನಗರದ ಪಾಂಡೇಶ್ವರ ನಿವಾಸಿಯಾಗಿದ್ದ ಮ್ಯಾಂಗಳೂರು ಮೂಸಾ ಯಾನೆ ಮೂಸಾ ಹಾಜಿ (74) ರವಿವಾರ ಮುಂಜಾವ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಉದ್ಯಮಿಯಾಗಿದ್ದ ಅವರು ಫುಟ್ಬಾಲ್ ಆಟಗಾರರಾಗಿ ಗುರುತಿಸಲ್ಪಟ್ಟಿದ್ದರು. ಕ್ರೀಡೆಗೆ ಅಪಾರವಾದ ಪ್ರೊತ್ಸಾಹ ನೀಡುತ್ತಿದ್ದ ಅವರು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.

ನಗರದ ಬೋಳಾರ ಜುಮಾ ಮಸೀದಿಯ ಆವರಣದಲ್ಲಿ ಮೃತರ ಅಂತ್ಯಕ್ರಿಯೆಯು ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ