ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ಜುಲೈ 15ರಿಂದ ಆಗಸ್ಟ್ 26ರ ವರೆಗೆ ?

Update: 2021-05-24 19:08 GMT

 ‌ಹೊಸದಿಲ್ಲಿ, ಮೇ 24: ಸಿಬಿಐಸ್ಇ 12ನೇ ತರಗತಿ ಪರೀಕ್ಷೆ ಜುಲೈ 15ರಿಂದ ಆಗಸ್ಟ್ 26ರ ವರೆಗೆ ನಡೆಯುವ ಸಾಧ್ಯತೆ ಇದೆ.
   
ಆದರೆ, ಪರೀಕ್ಷೆ ನಡೆಸುವ ಕಾರ್ಯಸಾಧ್ಯತೆ ಬಗ್ಗೆ ಪುನರ್ ಪರಿಶೀಲನಾ ಸಭೆ ನಡೆಸಿದ ಬಳಿಕ ಪರೀಕ್ಷೆಯ ಖಚಿತ ವೇಳಾಪಟ್ಟಿಯನ್ನು ಜೂನ್ 1ರಂದು ಸಿಬಿಎಸ್ಇ ಬಿಡುಗಡೆ ಮಾಡಲಿದೆ.
 
12ನೇ ತರಗತಿ ಪರೀಕ್ಷೆಯನ್ನು ಸಿಬಿಎಸ್ಇ ಆಫ್ಲೈನ್ ಮಾದರಿಯಲ್ಲಿ ನಡೆಸಲಿದೆ. ಆದರೆ, 12ನೇ ತರಗತಿಯ ಆಫ್ಲೈನ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಒಂದು ಗುಂಪಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲ ತಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಜುಲೈ 15ರಿಂದ ಆಗಸ್ 26ರ ನಡುವೆ ಪರೀಕ್ಷೆ ನಡೆಸಲು ಹಾಗೂ ಸೆಪ್ಟಂಬರ್ನಲ್ಲಿ ಫಲಿತಾಂಶ ಘೋಷಿಸಲು ಸಿಬಿಎಸ್ಇ ಪ್ರಸ್ತಾವಿಸಿದೆ ಎಂದು ಮೂಲಗಳು ತಿಳಿಸಿವೆ. ಅಂತಿಮ ನಿರ್ಧಾರ ಜೂನ್ 1ರಂದು ಹೊರ ಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News