ಸಿಬಿಎಸ್‌ಇ 12 ನೇ ತರಗತಿ ಬೋರ್ಡ್ ಪರೀಕ್ಷೆಯ ದಿನಾಂಕ ಜೂನ್ 1ರಂದು ಪ್ರಕಟ ಸಾಧ್ಯತೆ

Update: 2021-05-27 15:16 GMT

ಹೊಸದಿಲ್ಲಿ: ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು ಜೂನ್ 1 ರಂದು 12 ನೇ ತರಗತಿ ಬೋರ್ಡ್ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಸುವ ಸಾಧ್ಯತೆಯಿದೆ.

ರವಿವಾರ ನಡೆದ ಉನ್ನತ ಮಟ್ಟದ ಸಭೆಯ ನಂತರ ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಯ ಸ್ವರೂಪ ಮತ್ತು ದಿನಾಂಕಗಳನ್ನು ಪ್ರಕಟಿಸುವುದಾಗಿ ಪೋಖ್ರಿಯಾಲ್ ಹೇಳಿದ್ದರು.

ಈಗ, ಹೊಸ ಮಾಹಿತಿಯ ಪ್ರಕಾರ, ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗೆ 30 ನಿಮಿಷಗಳ ಅವಧಿಗೆ ನಡೆಸಲಾಗುವುದು, ಅದರಲ್ಲಿ ಆಯಾ ವಿಷಯಗಳ ಬಗ್ಗೆ ವಸ್ತುನಿಷ್ಠ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಸಿಬಿಎಸ್‌ಇ ಬೋರ್ಡ್ ಪರೀಕ್ಷೆ 2021 ಜುಲೈ 15 ರಿಂದ ಆಗಸ್ಟ್ 26 ರ ನಡುವೆ ಎಲ್ಲಾ ಕೋವಿಡ್ -19 ಸುರಕ್ಷತಾ ಪ್ರೋಟೋಕಾಲ್‌ಗಳ ನಡುವೆ ನಡೆಯಲಿದೆ ಎಂದು ವಿವಿಧ ಶಿಕ್ಷಣ ಸಚಿವರ ನಡುವಿನ ಸಭೆಯಲ್ಲಿ ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News