ಖಾಸಗಿ ಆಸ್ಪತ್ರೆಗಳು ಲಸಿಕೆಗಳನ್ನು ಹೇಗೆ ಪಡೆಯುತ್ತಿವೆ?: ಕೇಂದ್ರಕ್ಕೆ ದಿಲ್ಲಿ ಸರಕಾರ ಪ್ರಶ್ನೆ

Update: 2021-05-29 09:31 GMT

ಹೊಸದಿಲ್ಲಿ:ದಿಲ್ಲಿಯಲ್ಲಿ ಯುವಕರಿಗೆ ನೀಡಬೇಕಾಗಿರುವ  ಲಸಿಕೆಗಳು ಮುಗಿದಿದ್ದು, ಜೂನ್ 10 ರ ಮೊದಲು ಹೆಚ್ಚಿನ ಡೋಸ್ ಗಳು ಬರುವುದಿಲ್ಲ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಇಂದು ಹೇಳಿದ್ದಾರೆ.

ಲಸಿಕೆ ವಿತರಣಾ ವ್ಯವಸ್ಥೆಯ ವಿಚಾರದಲ್ಲಿ  ಕೇಂದ್ರವು ಮೊಂಡುತನ  ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ ಸಿಸೋಡಿಯಾ ಅವರು, ರಾಜ್ಯಗಳಿಗೆ ನೀಡಲು ತನ್ನ ಬಳಿ ಸಾಕಷ್ಟು ಲಸಿಕೆಗಳ ದಾಸ್ತಾನಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳು ಲಸಿಕೆ ಡೋಸ್ ಗಳನ್ನು ಹೇಗೆ ಪಡೆಯುತ್ತಿವೆ ಎಂದು ಪ್ರಶ್ನಿಸಿದರು.

"ಯುವಕರಿಗೆ (18-44) ಲಸಿಕೆಗಳು ಜೂನ್‌ನಲ್ಲಿ ಲಭ್ಯವಿರುತ್ತವೆ ಎಂದು ಕೇಂದ್ರವು ನಮಗೆ ತಿಳಿಸಿದೆ. ಆದರೆ ಜೂನ್ 10 ರ ಮೊದಲು ನಾವು ಅವುಗಳನ್ನು ಪಡೆಯಲು ಸಾಧ್ಯವಿಲ್ಲ" ಎಂದು ಸಿಸೋಡಿಯಾ ದೂರದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದಿನ ತಿಂಗಳು ಕೇಂದ್ರದಿಂದ 18-44 ವಯೋಮಾನದ ಫಲಾನುಭವಿಗಳಿಗಾಗಿ ದಿಲ್ಲಿಯು 5.5 ಲಕ್ಷ ಕೋವಿಡ್-19 ಲಸಿಕೆಗಳನ್ನು ಪಡೆಯುವ ನಿರೀಕ್ಷೆಯಿದೆ . ದಿಲ್ಲಿಯ 18-44 ವಯೋಮಾನದ 92 ಲಕ್ಷ ಜನರಿಗೆ ಲಸಿಕೆ ಹಾಕಲು 1.84 ಕೋಟಿ ಡೋಸ್‌ಗಳ ಅವಶ್ಯಕತೆ ಇದೆ. ಕೇಂದ್ರವು ಎಪ್ರಿಲ್‌ನಲ್ಲಿ 4.5 ಲಕ್ಷ ಡೋಸ್‌ಗಳನ್ನು ಹಾಗೂ  ಮೇ ತಿಂಗಳಲ್ಲಿ 3.67 ಲಕ್ಷ ಡೋಸ್‌ಗಳನ್ನು ನೀಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News