×
Ad

ಚೆಕ್ ಪೋಸ್ಟ್ ಮೇಲೆ ಉರುಳಿದ ಮರ: ಓರ್ವ ಸಿಬ್ಬಂದಿಗೆ ಗಾಯ

Update: 2021-05-30 17:39 IST

ಬೆಂಗಳೂರು, ಮೇ 30: ಮರದ ಕೊಂಬೆವೊಂದು ಉರುಳಿ ಪೊಲೀಸರ ತಾತ್ಕಾಲಿಕ ಚೆಕ್ ಪೋಸ್ಟ್ ಮೇಲೆ ಬಿದ್ದ ಪರಿಣಾಮ ಓರ್ವ ಸಿಬ್ಬಂದಿಗೆ ಗಾಯವಾಗಿರುವ ಘಟನೆ ಬೆಳಕಿಗೆ ಬಂದಿದೆ.

ರವಿವಾರ ಇಲ್ಲಿನ ಪಶ್ಚಿಮ ವಿಭಾಗ ವ್ಯಾಪ್ತಿಯ ನೈಸ್ ರಸ್ತೆಯ ಬಳಿ ಈ ಘಟನೆ ನಡೆದಿದ್ದು, ಗಾಳಿಯ ರಭಸದಿಂದ ಮಾವಿನ ಮರದ ಕೊಂಬೆ ಮುರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಪಾರಾಗಿದ್ದು, ಘಟನೆಯಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿ ಮಹೇಶ್ ಎಂಬುವರಿಗೆ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News