ರಾಜಕಾರಣಿಗಳಿಗೆ ಆದ್ಯತೆ ನೀಡುವ ನೀತಿ ಕೊನೆಗೊಳಿಸಲು ಫೇಸ್‌ಬುಕ್ ನಿರ್ಧಾರ?

Update: 2021-06-04 16:43 GMT

ಲಾಸ್ ಏಂಜಲಿಸ್ (ಅಮೆರಿಕ), ಜೂ. 4: ಸಂದೇಶಗಳನ್ನು ಪ್ರಕಟಿಸಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸುವ ಪ್ರಕ್ರಿಯೆ (ಕಂಟೆಂಟ್ ಮೋಡರೇಶನ್)ಗೆ ಒಳಪಡಿಸುವುದರಿಂದ ರಾಜಕಾರಣಿಗಳ ಸಂದೇಶಗಳಿಗೆ ನೀಡಲಾಗಿರುವ ವಿನಾಯಿತಿಯನ್ನು ಕೊನೆಗೊಳಿಸುವ ಬಗ್ಗೆ ಫೇಸ್‌ಬುಕ್ ಕಂಪೆನಿ ಪರಿಶೀಲನೆ ನಡೆಸುತ್ತಿದೆ ಎಂಬುದಾಗಿ ‘ವರ್ಜ್’ ಗುರುವಾರ ವರದಿ ಮಾಡಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಫೇಸ್‌ಬುಕ್‌ನಿಂದ ಅಮಾನತು ಮಾಡಿರುವ ವಿಷಯದಲ್ಲಿ ಕಂಪೆನಿಯ ಕಣ್ಗಾವಲು ಸಮಿತಿಯು ಮಾಡಿರುವ ಶಿಫಾರಸುಗಳ ಪರಿಶೀಲನೆಯ ಬಳಿಕ ಫೇಸ್‌ಬುಕ್ ಇದಕ್ಕೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎನ್ನಲಾಗಿದೆ.

ನಿಯಮಗಳು ಎಲ್ಲಾ ಬಳಕೆದಾರರಿಗೆ ಸಮಾನವಾಗಿ ಅನ್ವಯಿಸಬೇಕು ಹಾಗೂ ಸಂದೇಶವು ತೆಗೆದುಹಾಕಲು ಸಾಧ್ಯವಾಗದಷ್ಟು ಸುದ್ದಿ ಮೌಲ್ಯವನ್ನು ಹೊಂದಿದೆಯೇ ಎಂಬುದನ್ನು ನಿರ್ಧರಿಸುವಾಗ ಅಥವಾ ಪ್ರಭಾವಿ ಖಾತೆಗಳ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವಾಗ ಅನುಸರಿಸಲಾಗುವ ನಿಯಮಗಳ ಬಗ್ಗೆ ಬಳಕೆದಾರರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂಬುದಾಗಿ ಫೇಸ್‌ಬುಕ್ ಕಣ್ಗಾವಲು ಸಮಿತಿ ಶಿಫಾರಸು ಮಾಡಿದೆ.

ಫೇಸ್‌ಬುಕ್ ಮತ್ತು ಟ್ವಿಟರ್‌ನ ಹಾಲಿ ನಿಯಮಗಳು ಸಾಮಾನ್ಯ ಬಳಕೆದಾರರಿಗಿಂತ ಜಾಗತಿಕ ನಾಯಕರು, ಚುನಾಯಿತ ಅಧಿಕಾರಿಗಳು ಮತ್ತು ರಾಜಕೀಯ ನಾಯಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News