ಕೋವಿಡ್ ನಿಯಂತ್ರಣದ ಶ್ರೇಯ ಪಡೆಯುವತ್ತವೇ ಸರಕಾರ ಗಮನ ನೀಡಿದ್ದರಿಂದ ಸಮಸ್ಯೆ ಬೃಹದಾಕಾರವಾಗಿ ಬೆಳೆಯಿತು: ಅಮರ್ತ್ಯ ಸೇನ್

Update: 2021-06-05 07:22 GMT

ಮುಂಬೈ: "ಭಾರತದ ʼಗೊಂದಲಕ್ಕೊಳಗಾದʼ ಸರಕಾರ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಗಮನ ನೀಡುವ ಬದಲು ತನ್ನ ಕ್ರಮಗಳಿಗೆ ಶ್ರೇಯ ಪಡೆಯುವ ಕೆಲಸದತ್ತವೇ ಹೆಚ್ಚು ಗಮನ ನೀಡಿದ್ದು ಮನೋವ್ಯಾಧಿಗೆ ಕಾರಣವಾಗಿ ಬೃಹತ್ ಸಮಸ್ಯೆಯೇ ಎದುರಾಯಿತು" ಎಂದು ನೋಬೆಲ್ ಪಾರಿತೋಷಕ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ.

ಶುಕ್ರವಾರ ರಾಷ್ಟ್ರ ಸೇವಾದಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. "ಶ್ರೇಯಕ್ಕೆ ಕಾರಣವಾಗುವ ಉತ್ತಮ ಕೆಲಸಗಳತ್ತ ಗಮನ ನೀಡದೇ ಇರುವುದು ಒಂದು ಹಂತದ ಬೌದ್ಧಿಕ ಅಪ್ರಬುದ್ಧತನವನ್ನು ತೋರಿಸುತ್ತದೆ, ಇದನ್ನು ತಪ್ಪಿಸಬೇಕಿದೆ" ಎಂದು ಹಾರ್ವರ್ಡ್ ವಿವಿಯಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ಸೇನ್ ಹೇಳಿದರು.

"ಅದು (ಸರಕಾರ) ಶ್ರೇಯವನ್ನು ಪಡೆಯಲು ಯತ್ನಿಸುವುದರ ಜತೆಗೆ ಭಾರತವೇ ಜಗತ್ತನ್ನು ರಕ್ಷಿಸಲಿದೆಯೆಂಬ ರೀತಿಯಲ್ಲಿ ಕೊಚ್ಚಿಕೊಳ್ಳಲಾರಂಭಿಸಿತು. ಅದೇ ಸಮಯ ದೇಶದಲ್ಲಿ ಸಮಸ್ಯೆ ಬೆಳೆದು ಜನರ ಜೀವನಗಳನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಳ್ಳಲು ಅದು ಅನುಮತಿಸಿತು" ಎಂದು ಸೇನ್ ಹೇಳಿದರು.

ಆರೋಗ್ಯ ಸೇವೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳ ಅಗತ್ಯವಿದೆಯಲ್ಲದೆ ಆರ್ಥಿಕ ಮತ್ತು ಸಾಮಾಜಿಕ ನೀತಿಗಳಲ್ಲೂ ಬದಲಾವಣೆ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News