ಕೊರೋನ ವೈರಸ್ ನ ಡೆಲ್ಟಾ ಪ್ರಭೇದವು 40 ಶೇ. ಹೆಚ್ಚು ಸಾಂಕ್ರಾಮಿಕ: ಬ್ರಿಟನ್ ಆರೋಗ್ಯ ಸಚಿವ

Update: 2021-06-06 17:40 GMT

ಲಂಡನ್, ಜೂ. 6: ಕೊರೋನ ವೈರಸ್ನ ಡೆಲ್ಟಾ ಪ್ರಭೇದವು ಆಲ್ಫಾ ಪ್ರಭೇದಕ್ಕಿಂತ 40 ಶೇಕಡ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಬ್ರಿಟನ್ನ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ರವಿವಾರ ಹೇಳಿದ್ದಾರೆ.

ಬ್ರಿಟನ್ನಲ್ಲಿ ಸಂಭವಿಸಿದ ಹಿಂದಿನ ಕೊರೋನ ವೈರಸ್ ಅಲೆಯ ವೇಳೆ ಆಲ್ಫಾ ಪ್ರಭೇದವು ವ್ಯಾಪಕ ವಿನಾಶಕ್ಕೆ ಕಾರಣವಾಗಿತ್ತು.
ಆದರೆ, ಲಸಿಕೆಗಳ ಎರಡೂ ಡೋಸ್ಗಳನ್ನು ತೆಗೆದುಕೊಂಡವರು ಈ ಎರಡೂ ಪ್ರಭೇದಗಳ ಸೋಂಕಿನಿಂದ ರಕ್ಷಣೆ ಪಡೆಯುತ್ತಾರೆ ಎಂದು ಅವರು ತಿಳಿಸಿದರು.

‘‘ಭಾರತದಲ್ಲಿ ಮೊದಲು ಪತ್ತೆಯಾಗಿರುವ ಡೆಲ್ಟಾ ಪ್ರಭೇದವು ಸುಮಾರು 40 ಶೇಕಡ ಹೆಚ್ಚು ಸಾಂಕ್ರಾಮಿಕ ಎನ್ನುವುದು ನಾನು ಹೊಂದಿರುವ ಹೊಸ ಮಾಹಿತಿಯಾಗಿದೆ’’ ಎಂದು ‘ಸ್ಕೈ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಹ್ಯಾನ್ಕಾಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News