ಅಫ್ಘಾನ್: ರಸ್ತೆ ಬದಿಯಲ್ಲಿದ್ದ ಬಾಂಬ್ ಬಸ್ ಗೆ ಅಪ್ಪಳಿಸಿ ಸ್ಫೋಟ: 11 ಮಂದಿ ಮೃತ್ಯು

Update: 2021-06-06 17:43 GMT

ಕಾಬೂಲ್ (ಅಫ್ಘಾನಿಸ್ತಾನ), ಜೂ. 6: ಅಫ್ಘಾನಿಸ್ತಾನದಲ್ಲಿ ರಸ್ತೆ ಬದಿಯಲ್ಲಿ ಇಡಲಾಗಿದ್ದ ಬಾಂಬೊಂದು ಬಸ್ಸೊಂದಕ್ಕೆ ಬಡಿದು ನಾಲ್ವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿ ಕನಿಷ್ಠ 11 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ದಾಳಿಯು ಪಶ್ಚಿಮದ ರಾಜ್ಯ ಬದ್ಗಿಸ್ ನಲ್ಲಿ ಶನಿವಾರ ಸಂಜೆ ನಡೆದಿದೆ. ಸೆಪ್ಟಂಬರ್ 11ರ ವೇಳೆಗೆ ಅಫ್ಘಾನಿಸ್ತಾನದಲ್ಲಿರುವ ಎಲ್ಲ ವಿದೇಶಿ ಸೈನಿಕರು ವಾಪಸಾಗಲು ಸಿದ್ಧತೆಗಳು ನಡೆಯುತ್ತಿರುವಂತೆಯೇ, ಉಗ್ರರು ತಮ್ಮ ದಾಳಿಗಳನ್ನು ಹೆಚ್ಚಿಸುತ್ತಿದ್ದಾರೆ.

ಸ್ಫೋಟಕ್ಕೆ ಯಾವುದೇ ಗುಂಪು ಹೊಣೆ ಹೊತ್ತುಕೊಂಡಿಲ್ಲ. ಆದರೆ, ರಸ್ತೆ ಬದಿಯಲ್ಲಿ ಬಾಂಬನ್ನು ತಾಲಿಬಾನ್ ಇಟ್ಟಿದೆ ಎಂದು ಬದ್ಗಿಸ್ ರಾಜ್ಯದ ಗವರ್ನರ್ ಹಿಸಾಮುದ್ದೀನ್ ಶಾಮ್ಸ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News