ಸೋಮವಾರದಿಂದ ದಿಲ್ಲಿಯಲ್ಲಿ ಅಂಗಡಿ,ರೆಸ್ಟೋರೆಂಟ್,ಮಾಲ್ ಗಳು ಪುನರಾರಂಭ

Update: 2021-06-13 08:28 GMT

ಹೊಸದಿಲ್ಲಿ: ರಾಜಧಾನಿಯಲ್ಲಿನ ಕೋವಿಡ್ ಸಂಖ್ಯೆಗಳು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿರುವುದರಿಂದ ದಿಲ್ಲಿಯ ಅಂಗಡಿಗಳು, ಮಾಲ್‌ಗಳು ಹಾಗೂ  ರೆಸ್ಟೋರೆಂಟ್‌ಗಳಿಗೆ ನಿರ್ಬಂಧವನ್ನು ಸೋಮವಾರದಿಂದ ಸಡಿಲಿಸಲಾಗುತ್ತದೆ.

ಪ್ರಸ್ತುತ ಬೆಸ-ಸಮ ವ್ಯವಸ್ಥೆಗೆ ಬದಲಾಗಿ ವಾರದಲ್ಲಿ ಏಳು ದಿನ ಅಂಗಡಿಗಳು ತೆರೆದಿರುತ್ತವೆ.

ಒಂದು ವಾರ ಮಾತ್ರ  ಸಡಿಲಿಕೆ ಇರುತ್ತದೆ ಹಾಗೂ  ಕೋವಿಡ್ ಸಂಖ್ಯೆಗಳು ಹೆಚ್ಚಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂಗಡಿ ಸಮಯ ಒಂದೇ ಆಗಿರುತ್ತದೆ .  ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ, ತೆರೆದಿರುತ್ತದೆ  ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.

ಹೋಮ್ ಡೆಲಿವರಿಗೆ  ಮಾತ್ರ ತೆರೆದಿದ್ದ ರೆಸ್ಟೋರೆಂಟ್‌ಗಳು ಈಗ ಡಿನ್ನರ್ ಗೆ ಅವಕಾಶವಿದ್ದು,ಆದರೆ ಕೇವಲ 50 ಪ್ರತಿ ಶತದಷ್ಟು ಆಸನ ಸಾಮರ್ಥ್ಯವನ್ನು ಹೊಂದಿರಬೇಕಾಗುತ್ತದೆ.

ಶೇಕಡಾ 50 ರಷ್ಟು ಮಾರಾಟಗಾರರೊಂದಿಗೆ ವಾರದ ಮಾರುಕಟ್ಟೆಗಳಿಗೆ ಸಹ ಅವಕಾಶ ನೀಡಲಾಗಿದೆ. ಪ್ರತಿ ಪುರಸಭೆಯ ವಲಯದಲ್ಲಿ ದಿನಕ್ಕೆ ಒಂದು ಮಾರುಕಟ್ಟೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಸೆಲೂನ್ ಗಳು  ತೆರೆಯಬಹುದು. ಆದರೆ ಸ್ಪಾಗಳು ಮುಚ್ಚಲ್ಪಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News