ಅಸ್ಸಾಂ: ದನ ಕಳ್ಳತನದ ಶಂಕೆಯ ಮೇಲೆ ವ್ಯಕ್ತಿಯನ್ನು ಥಳಿಸಿ ಹತ್ಯೆ

Update: 2021-06-13 10:55 GMT
photo: Free Press Journal

ಗುವಾಹಟಿ: ಅಪ್ಪರ್  ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಲ್ಲಿ ಜಾನುವಾರು ಕಳ್ಳತನದ ಅನುಮಾನದ ಮೇಲೆ 34 ವರ್ಷದ ವ್ಯಕ್ತಿಯೊಬ್ಬನನ್ನು ಜನರ ಗುಂಪು  ಥಳಿಸಿ ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಕೊರ್ಜೊಂಗಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತನನ್ನು ಶರತ್ ಮೊರನ್ ಎಂದು ಗುರುತಿಸಲಾಗಿದೆ.

ಮೋರನ್ ಕೊರ್ಡೊಯ್ ಗ್ರಾಮದವನಾಗಿದ್ದು ಕೊರ್ಜೊಂಗಾಗೆ ಸ್ನೇಹಿತನ ಮನೆಯಲ್ಲಿ  ರಾತ್ರಿ ಕಳೆದಿದ್ದರು, ದನಗಳ್ಳ ಎಂಬ ಅನುಮಾನದ ಮೇಲೆ ಜನರ ಗುಂಪೊಂದು ಮೋರನ್ ಮೇಲೆ ಹಲ್ಲೆ ನಡೆಸಿತ್ತು.

  ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೊರನ್ ಅವರನ್ನು ರಕ್ಷಿಸಿ ಡೂಮ್‌ಡೂಮಾದ ಎಫ್‌ಆರ್‌ಯು ಆಸ್ಪತ್ರೆಗೆ ದಾಖಲಿಸಿದ್ದಾರೆ, ಅಲ್ಲಿ ಮೋರನ್ ಅವರು ತೀವ್ರ ಗಾಯದಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

"ಘಟನೆಗೆ ಸಂಬಂಧಿಸಿದಂತೆ ನಾವು 12 ಜನರನ್ನು ವಶಕ್ಕೆ ಪಡೆದಿದ್ದೇವೆ ಹಾಗೂ  ಅವರನ್ನು ಪ್ರಶ್ನಿಸುತ್ತಿದ್ದೇವೆ. ಸಂತ್ರಸ್ತನ  ದೇಹದಲ್ಲಿ ಹಲವಾರು ಗಾಯದ ಗುರುತುಗಳು ಕಂಡುಬಂದಿವೆ ಹಾಗೂ  ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇವೆ,  ಬಲಿಪಶು ಮೊರನ್ ಅವರ  ಚಿಕ್ಕಪ್ಪ ನೀಡಿದ ದೂರಿನ ಬಳಿಕ  ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಹಾಗೂ  34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ" ಎಂದು ಟಿನ್ಸುಕಿಯಾದ ಪೊಲೀಸ್ ವರಿಷ್ಠಾಧಿಕಾರಿ ಡೆಬೊಜಿತ್ ಡಿಯೋರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News