ನಂದಾದೇವಿಯ ದಟ್ಟ ಅರಣ್ಯದ ಕಾವಲಿಗೆ ಮೂವರು ಮಹಿಳೆಯರು !

Update: 2021-06-14 04:11 GMT

ಡೆಹ್ರಾಡೂನ್ : ದೇಶದ ಎರಡನೇ ಅತಿ ಎತ್ತರದ ಶಿಖರ ಎನಿಸಿದ ಸುಮಾರು 25 ಸಾವಿರ ಅಡಿ ಎತ್ತರದಲ್ಲಿರುವ ನಂದಾದೇವಿಯ ದಟ್ಟ ಅರಣ್ಯದ ಗಸ್ತು ಕಾವಲಿಗೆ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮೂವರು ಮಹಿಳೆಯರನ್ನು ನಿಯೋಜಿಸಲಾಗಿದೆ.

ದುರ್ಗಾ ಸತಿ (32), ರೋಶ್ನಿ ನೇಗಿ (25) ಮತ್ತು ಮಮತಾ ಕನ್ವಾಸಿ (33) ಈ ಅಪರೂಪದ ಕಾರ್ಯಕ್ಕೆ ಕಳೆದ ವಾರ ನೇಮಕಗೊಂಡಿದ್ದಾರೆ.

"ಅಪರೂಪದ ಪ್ರಾಣಿಗಳು ಮತ್ತು ಸಸ್ಯಗಳನ್ನು ಕಾಪಾಡುವ ಸಲುವಾಗಿ ನಾವು ಈ ಪರ್ವತದಲ್ಲಿ ಗಸ್ತು ತಿರುಗುತ್ತಿದ್ದೇವೆ. ಇಷ್ಟು ಎತ್ತರದ ಪ್ರದೇಶವಾದರೂ ಇಲ್ಲಿ ಕಳ್ಳಬೇಟೆಗಾರರ ಅಪಾಯ ಸದಾ ಇದ್ದೇ ಇದೆ" ಎಂದು ಮಮತಾ ಹೇಳುತ್ತಾರೆ. ನಾವು ಜಲಮೂಲವನ್ನೂ ಪರಿಶೀಲಿಸುತ್ತಿದ್ದು, ಭದ್ರತಾ ದೃಷ್ಟಿಯಿಂದ ಕೂಡಾ ಪರಿಶೀಲನೆ ನಡೆಸುತ್ತಿದ್ದೇವೆ. ನಮ್ಮ ಗಡಿ ಸುರಕ್ಷಿತವಾಗಿರುವುದನ್ನು ನಾವು ಖಾತರಿಪಡಿಸುತ್ತೇವೆ ಎಂದು ವಿವರಿಸಿದರು.

ಇವರ ಈ ನಿಯೋಜನೆಗೆ ಸ್ವಲ್ಪಮಟ್ಟಿಗೆ ಅದೃಷ್ಟ ಮತ್ತು ಸ್ವತಃ ಉತ್ಸಾಹ ಕಾರಣವಾಗಿದೆ. ಮಹಿಳಾ ಅರಣ್ಯ ರಕ್ಷಕಿಯರು ಸಾಮಾನ್ಯವಾಗಿ 11500 ಅಡಿ ಎತ್ತರದ ಲಾಟಾ ಪ್ರದೇಶದವರೆಗೂ ಹೋಗುತ್ತಾರೆ. ಆದರೆ ಅಲ್ಲಿಂದ ಮುಂದಕ್ಕೆ ಹೋಗದಂತೆ ಸೂಚಿಸಲಾಗುತ್ತದೆ. "ಆದರೆ ನಾವು ಈಗ ಹೋಗದಿದ್ದರೆ ಮುಂದೆ ಎಂದು ? ಎಂಬುದಾಗಿ ನಾವು ಯೋಚಿಸಿದೆವು. ನಮ್ಮ ದೇಶ ಹಾಗೂ ಪ್ರಕೃತಿಯ ಸೇವೆ ಸಲ್ಲಿಸುವ ಸಲುವಾಗಿಯೇ ನಾವು ಈ ಸೇವೆಗೆ ಸೇರಿದೆವು" ಎಂದು ರೋಶ್ನಿ ಹೇಳುತ್ತಾರೆ.

ಜೂನ್ 1ರಂದು ಇವರು ಭೆಲ್ಟಾ (11880 ಅಡಿ)ಗೆ ಚಾರಣ ಕೈಗೊಂಡರು. ಬಳಿಕ ಲತಾ ಖರ್ಕ್ (12800 ಅಡಿ) ಮತ್ತು ಅಲ್ಲಿಂದ ಝಂದಿಧಾರಾ (13800 ಅಡಿ) ಪ್ರದೇಶದತ್ತ ಮುಂದುವರಿದರು. ಲತಾ ಖರ್ಕ್‌ಗೆ ವಾಪಸ್ಸಾಗಿ ಬಳಿಕ ತಮ್ಮ ಗಮ್ಯತಾಣವಾದ 14500 ಅಡಿ ಎತ್ತರದ ಧಾರಸಿಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News