ಮೌಲ್ಯಮಾಪನದ ಮಾನದಂಡದ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಆಗಸ್ಟ್- ಸೆಪ್ಟಂಬರ್ ನಲ್ಲಿ ಸಿಬಿಎಸ್ಇ ಪರೀಕ್ಷೆ

Update: 2021-06-21 18:36 GMT

ಹೊಸದಿಲ್ಲಿ, ಜೂ. 21: ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ನೀಡಲಾದ ಅಂಕಗಳ ಕುರಿತಂತೆ ಸಮಾಧಾನವಿಲ್ಲದ ವಿದ್ಯಾರ್ಥಿಗಳಿಗೆ 2021 ಆಗಸ್ಟ್ 15ರಿಂದ ಸೆಪ್ಟಂಬರ್ 15ರ ವರೆಗೆ ಪರೀಕ್ಷೆ ನಡೆಸಲಾಗುವುದು ಎಂದು ಸಿಬಿಎಸ್ಇ ಸೋಮವಾರ ತಿಳಿಸಿದೆ. ಕೋವಿಡ್ ಪರಿಸ್ಥಿತಿ ಆಧರಿಸಿ ಪರೀಕ್ಷೆಯ ದಿನಾಂಕ ಬದಲಾಗಲಿದೆ.

ಅದೇ ರೀತಿ ಖಾಸಗಿ ಹಾಗೂ ಕಂಪಾರ್ಟ್ಮೆಂಟ್ ಪರೀಕ್ಷೆಗಳು ಕೂಡ ಇದೇ ಅವಧಿಯಲ್ಲಿ ನಡೆಯಲಿವೆ ಎಂದು ಸಿಬಿಎಸ್ಇ ಸೋಮವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ. ಜುಲೈ 31ರಂದು ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಫಲಿತಾಂಶ, ಅಂಕದ ಕುರಿತು ತೃಪ್ತರಾಗದಿದ್ದಲ್ಲಿ, ಸಿಬಿಎಸ್ಇಯು ಪರೀಕ್ಷೆಗಾಗಿ ಆನ್ಲೈನ್ ಮುಖಾಂತರ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಿದೆ. ಸಿಬಿಎಸ್ಇಯ ಅಧಿಕೃತ ವೆಬ್ಸೈಟ್ ಮೂಲಕ ಹೆಸರು ನೋಂದಣಿ ಮಾಡಬಹುದು. ಪರಿಸ್ಥಿತಿ ಆಧರಿಸಿ ಕೆಲವು ಮುಖ್ಯ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ನಡೆಸಿದ ಅಂಕಗಳನ್ನೇ ಅಂತಿಮವಾಗಿ ಪರಿಗಣಿಸಲಾಗುವುದು ಎಂದು ಸಿಬಿಎಸ್ಇ ಅಫಿಡವಿಟ್ನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News