ಮೋದಿಗೆ ಕೃತಜ್ಞತೆ ಹೇಳುವ ಬ್ಯಾನರ್ ಹಾಕಲು ಯುಜಿಸಿ ಸೂಚನೆ : ವರದಿ

Update: 2021-06-22 03:43 GMT
ಫೋಟೊ : Twitter/@UnivofDelhi

ಹೊಸದಿಲ್ಲಿ: ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೋವಿಡ್-19 ಲಸಿಕೆ ಪೂರೈಸುವುದಾಗಿ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುವ ಬ್ಯಾನರ್‌ಗಳನ್ನು ಹಾಕುವಂತೆ ಎಲ್ಲ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಸೂಚನೆ ನೀಡಿದೆ ಎಂದು the new indian express ವರದಿ ಮಾಡಿದೆ.

ಕೋವಿಡ್-19 ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಘೋಷಿಸಿರುವ ಹೊಸ ನೀತಿ ಸೋಮವಾರ ಜಾರಿಗೆ ಬಂದಿದೆ. ಈ ಮಾರ್ಗಸೂಚಿಯ ಅನ್ವಯ 18 ವರ್ಷ ಮೇಲ್ಪಟ್ಟ ಎಲ್ಲರೂ ಉಚಿತ ಲಸಿಕೆಗೆ ಅರ್ಹರಾಗಿರುತ್ತಾರೆ.

ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸಲಾಗಿರುವ ವಾಟ್ಸ್ಆ್ಯಪ್ ಸಂದೇಶದಲ್ಲಿ ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್, ಈ ಬ್ಯಾನರ್‌ಗಳನ್ನು ಸಾಮಾಜಿಕ ಜಾಲತಾಣ ಪುಟಗಳಲ್ಲಿ ಶೇರ್ ಮಾಡುವಂತೆಯೂ ಸೂಚಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೇಳಲು ಕರೆ ಮಾಡಿದಾಗ ಅವರು ಉತ್ತರಿಸಿಲ್ಲ. ಆದರೆ ಮೂರು ವಿಶ್ವವಿದ್ಯಾನಿಯಗಳು ಈ ಸೂಚನೆಯನ್ನು ಸ್ವೀಕರಿಸಿದ್ದಾಗಿ ಸ್ಪಷ್ಟಪಡಿಸಿವೆ.

"ಒಪ್ಪಿಗೆ ನೀಡಲಾದ ಹೋರ್ಡಿಂಗ್ ಮತ್ತು ಬ್ಯಾನರ್‌ಗಳ ವಿನ್ಯಾಸವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಿದ್ಧಪಡಿಸಿದ್ದು, ಇದನ್ನು ಲಗತ್ತಿಸಲಾಗಿದೆ" ಎಂದು ಜೈನ್ ಹೇಳಿದ್ದಾರೆ. ಈ ಪೋಸ್ಟರ್‌ನಲ್ಲಿ "ಥ್ಯಾಂಕ್ಯೂ ಪಿಎಂ ಮೋದಿ" ಎಂದು ಬರೆಯಲಾಗಿದೆ.

ದೆಹಲಿ, ಹೈದರಾಬಾದ್, ಭೋಪಾಲ್‌ನ ಎಲ್‌ಎನ್‌ಸಿಟಿ ವಿವಿ, ಬೆನೆಟ್ ವಿವಿ, ನಾರ್ಥ್‌ಕ್ಯಾಪ್ ವಿವಿ ಮತ್ತಿತರ ವಿವಿಗಳು ಬ್ಯಾನರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಥ್ಯಾಂಕ್ಯೂ ಮೋದಿಜಿ ಎಂಬ ಹ್ಯಾಶ್‌ಟ್ಯಾಗ್‌ ನೊಂದಿಗೆ ಪೋಸ್ಟ್ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News