ಪಿಲಿಪ್ಪೀನ್ಸ್ ಮಾಜಿ ಅಧ್ಯಕ್ಷ ಬೆನಿಗ್ನೊ ಅಕ್ವಿನೊ ನಿಧನ

Update: 2021-06-24 18:33 GMT

ಮನಿಲಾ, ಜೂ.24: ಸುದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಪಿಲಿಪ್ಪೀನ್ಸ್ ಮಾಜಿ ಅಧ್ಯಕ್ಷ ಬೆನಿಗ್ನೊ ಅಕ್ವಿನೊ (111) ನಿಧನರಾಗಿರುವುದಾಗಿ ಹಲವು ಸುದ್ಧಿ ಮಾಧ್ಯಮಗಳು ವರದಿ ಮಾಡಿವೆ. ಬಳಿಕ ಈ ಸುದ್ಧಿಯನ್ನು ಅವರ ಕುಟುಂಬ ದೃಢಪಡಿಸಿದೆ. 61 ವರ್ಷದ ಅಕ್ವಿನೊ ಕಳೆದ 5 ತಿಂಗಳಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. 

ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಗುರುವಾರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಸುದ್ಧಿಸಂಸ್ಥೆ ವರದಿ ಮಾಡಿದೆ. ದೇಶದ 15ನೇ ಅಧ್ಯಕ್ಷರಾಗಿದ್ದ ಅಕ್ವಿನೊ 2010ರಿಂದ 2016ರವರೆಗೆ ಅಧಿಕಾರದಲ್ಲಿದ್ದರು. ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಅಸ್ವಸ್ಥರಾಗಿದ್ದ ಅಕ್ವಿನೊ ನಿದ್ದೆಯಲ್ಲೇ ಶಾಂತರೀತಿಯ ಮರಣ ಹೊಂದಿದ್ದಾರೆ ಎಂದು ಅವರ ಕುಟುಂಬದವರು ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News