ಜಿಐಓ ನೂತನ ರಾಜ್ಯಾಧ್ಯಕ್ಷೆಯಾಗಿ ಬೆಂಗಳೂರಿನ ಸುಮಯ್ಯ ರೋಷನ್ ಆಯ್ಕೆ
Update: 2021-06-28 18:16 IST
ಬೆಂಗಳೂರು: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಷನ್(ಜಿಐಓ) ಕರ್ನಾಟಕ ಇದರ ನೂತನ ರಾಜ್ಯಾಧ್ಯಕ್ಷೆಯಾಗಿ ಬೆಂಗಳೂರಿನ ಸುಮಯ್ಯ ರೋಷನ್ ಆಯ್ಕೆಯಾಗಿದ್ದಾರೆ. ನಿನ್ನೆ ಝೂಮ್ ಆ್ಯಪ್ ಮೂಲಕ ನಡೆಸಲಾದ ವರ್ಚುಯಲ್ ಚುನಾವಣೆಯಲ್ಲಿ ಬೆಂಗಳೂರಿನ ಸುಮಯ್ಯ ರೋಷನ್ ಅವರನ್ನು 8ನೇ ಅವಧಿಗೆ ರಾಜ್ಯಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು.
ನೂತನ ಸಲಹಾ ಮಂಡಳಿ ಸದಸ್ಯರಾಗಿ ಡಾ. ಶಿಫಾ ಫಾತಿಮಾ, ಬೆಂಗಳೂರು, ಬಸಿರಾ ಬಾನು, ತೀರ್ಥಹಳ್ಳಿ, ಮುಬರ್ರಾ ನಿಸಾರ್, ಬೆಂಗಳೂರು, ಡಾ ಆಯೆಷಾ ಫಿದಾ, ಮಂಗಳೂರು, ಬುಹೈಸಾ ಬೆಲ್ಗಾಮಿ, ಬಳ್ಳಾರಿ, ಮುಹಿ ನಿಶಾತ್, ಗುಲ್ಬರ್ಗಾ, ಮಸೀಹ ಮೈಸೂರು, ಆಯೆಷಾ ತಬಸ್ಸುಮ್, ಮಂಗಳೂರು, ನವಿದಾ ಹುಸೈನ್ ಅಸಾದಿ, ಹಾಸನ, ಸಯೀದಾ ನೌಶಾಬಾ, ಗುಲ್ಬರ್ಗಾ, ಹಿಬಾ ಫಾತಿಮಾ, ಮಂಗಳೂರು, ಅಮಾತುಷ್ ಶಿಫಾ, ರಾಯಚೂರು, ಆಮ್ನಾ ಕೌಸರ್, ಉಡುಪಿ, ಸಯೀದಾ ಇಕ್ರಾ ರಜ್ವಿ, ರಾಯಚೂರು, ಮುಶೀರ, ಮಂಗಳೂರು ಆಯ್ಕೆಯಾಗಿದ್ದಾರೆ.