×
Ad

ಬೆಂಗಳೂರಿನಲ್ಲಿ ಕೋವಿಡ್ ಪ್ರಮಾಣ ಗಣನೀಯ ಇಳಿಕೆ: ನಗರದಲ್ಲಿ ಬೆಡ್ ಗಳು ಖಾಲಿ ಖಾಲಿ

Update: 2021-06-29 20:12 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.29: ಕೋವಿಡ್ ಎರಡನೆ ಅಲೆ ಸಂದರ್ಭದಲ್ಲಿ ಬೆಂಗಳೂರು ನಗರದೆಲ್ಲೆಡೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ತೀವ್ರ ಬೇಡಿಕೆ ಉಂಟಾಗಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಬೆಡ್ ಗಳು ಖಾಲಿ ಉಳಿದಿವೆ.

ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಬೆಂಗಳೂರಿನಲ್ಲಿ ಕಳೆದ ಮೂರು ವಾರಗಳಿಂದ ಗಣನೀಯವಾಗಿ ಇಳಿಕೆಯಾಗಿದ್ದು, ಇದರೊಂದಿಗೆ ಆಕ್ಸಿಜನ್ ಹಾಗೂ ಬೆಡ್‍ಗಳ ಬೇಡಿಕೆ ಕೂಡ ಕಡಿಮೆಯಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿನ ಸರಕಾರಿ ಕೋಟಾದ 6,470 ಹಾಸಿಗೆ ಪೈಕಿ 971 ಹಾಸಿಗೆ ಮಾತ್ರ ಭರ್ತಿಯಾಗಿವೆ. ಜತೆಗೆ, 7 ಹಾಸಿಗೆಗಳನ್ನು ಮಾತ್ರ ಬ್ಲಾಕ್ ಮಾಡಲಾಗಿದ್ದು, 5,492 ಖಾಲಿ ಇವೆ. ಇನ್ನು 2,514 ಜನರಲ್ ಹಾಸಿಗೆ ಪೈಕಿ 278 ಮಾತ್ರ ಭರ್ತಿಯಾಗಿದ್ದು, 2,233 ಖಾಲಿ ಇವೆ. 569 ಐಸಿಯು ಹಾಸಿಗೆ ಪೈಕಿ 157 ಭರ್ತಿಯಾಗಿದ್ದು, 412 ಖಾಲಿ ಉಳಿದಿದೆ.

ಅದೇ ರೀತಿ, 2,744 ಎಚ್‍ಡಿಯು ಹಾಸಿಗೆಗಳ ಪೈಕಿ 326 ಭರ್ತಿಯಾಗಿದ್ದು 2,416 ಹಾಸಿಗೆ ಖಾಲಿ ಇವೆ. 643 ವೆಂಟಿಲೇಟರ್ ಸಹಿತ ಐಸಿಯು ಬೆಡ್‍ಗಳ ಪೈಕಿ 210 ಭರ್ತಿಯಾಗಿದ್ದು, 429 ಖಾಲಿ ಇವೆ ಎಂದು ಪಾಲಿಕೆ ಅಧಿಕೃತ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಅಧ್ಯಕ್ಷ ಡಾ.ಎಚ್.ಎಂ. ಪ್ರಸನ್ನ, ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹಾಗೂ ಆಕ್ಸಿಜನ್ ಬೆಡ್‍ಗಳ ಬೇಡಿಕೆ ಎರಡೂ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News