ಕರ್ನಾಟಕದ ನಾಲ್ವರು ಸಚಿವರು ಸಹಿತ ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ

Update: 2021-07-07 18:46 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕರ್ನಾಟಕದ ನಾಲ್ವರಿಗೂ ಖಾತೆ ಹಂಚಿಕೆ ಮಾಡಲಾಗಿದೆ.

ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ, ಎ.ನಾರಾಯಣ ಸ್ವಾಮಿ  ಅವರಿಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ, ರಾಜೀವ್ ಚಂದ್ರಶೇಖರ್ ಅವರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಹಾಗೂ ಭಗವಂತ ಖೂಬಾ ಅವರಿಗೆ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ನೀಡಲಾಗಿದೆ.

ಜ್ಯೋತಿರಾದಿತ್ಯ ಸಿಂಧಿಯಾಗೆ ನಾಗರಿಕ ವಿಮಾನ ಯಾನ ಖಾತೆ, ಒಡಿಶಾ ಸಂಸದ ಅಶ್ವಿನಿ ವೈಷ್ಣವ್ ಗೆ ರೈಲ್ವೇ ಖಾತೆಯ ಜೊತೆಗೆ ಮಾಹಿತಿ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ನೀಡಲಾಗಿದೆ.

ಗುಜರಾತಿನ ಮನ್ಸೂಖ್ ಮಾಂಡವಿಯಾ ಅವರಿಗೆ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು  ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ನೀಡಲಾಗಿದೆ.

ಮಹಾರಾಷ್ಟ್ರದ ನಾರಾಯಣ ರಾಣೆ ಅವರಿಗೆ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು, ಸರ್ಬಾನಂದ ಸೊನೊವಾಲ್ ಗೆ ಬಂದರು, ಹಡಗು ಹಾಗೂ ಜಲಮಾರ್ಗಗಳ ಖಾತೆಯ ಜೊತೆಗೆ ಆಯುಷ್ ಖಾತೆ ಹಂಚಲಾಗಿದೆ.

ಡಾ.ವೀರೇಂದ್ರ ಕುಮಾರ್ ಅವರಿಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ, ಪಿಯೂಷ್ ಗೋಯಲ್ ಅವರಿಗೆ ವಾಣಿಜ್ಯ ಹಾಗೂ ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಹಾಗೂ ಸಾರ್ವಜನಿಕ ವಿತರಣೆ ಹಾಗೂ ಜವಳಿ ಖಾತೆ ನೀಡಲಾಗಿದೆ.

ಧರ್ಮೇಂದ್ರ ಪ್ರಧಾನ್ ಅವರಿಗೆ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮ ಶೀಲತೆ ಖಾತೆ ನೀಡಲಾಗಿದೆ.  ಕಿರಣ್ ರಿಜಿಜು ಅವರಿಗೆ ಕಾನೂನು ಹಾಗೂ ನ್ಯಾಯ ಖಾತೆ, ಹರ್ ದೀಪ್ ಸಿಂಗ್ ಪುರಿ ಅವರಿಗೆ  ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ  ಹಾಗೂ ವಸತಿ ಮತ್ತು ನಗರ ವ್ಯವಹಾರ ಖಾತೆ ನೀಡಲಾಗಿದೆ.

ಭೂಪಿಂದರ್ ಯಾದವ್ ಅವರಿಗೆ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ನೀಡಲಾಗಿದೆ. ಅನುರಾಗ್ ಠಾಕೂರ್ ಅವರಿಗೆ  ಮಾಹಿತಿ ಹಾಗೂ ಪ್ರಸಾರ, ಯುವಜನ ವ್ಯವಹಾರ ಹಾಗೂ  ಕ್ರೀಡಾ ಖಾತೆಯನ್ನು ಹಂಚಲಾಗಿದೆ.

ಕೃಷ್ಣ ರೆಡ್ಡಿ ಅವರಿಗೆ ಸಂಸ್ಕೃತಿ, ಪ್ರವಾಸೋದ್ಯಮ, ಈಶಾನ್ಯ ವಲಯ ಅಭಿವೃದ್ಧಿ ಖಾತೆ ,ಪುರುಷೋತ್ತಮ ರೂಪಾಲರಿಗೆ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನೋದ್ಯಮ ಖಾತೆ, ಆರ್ ಕೆ ಸಿಂಗ್ ಗೆ ಇಂಧನ ಖಾತೆ  ಹಾಗೂ  ಮಹೇಂದ್ರನಾಥ ಪಾಂಡೆ ಅವರಿಗೆ ಭಾರೀ ಕೈಗಾರಿಕೆ ಖಾತೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News