ಬ್ರಿಟನ್: ಲಸಿಕೆ ತೆಗೆದುಕೊಂಡ ಪ್ರಯಾಣಿಕರಿಗೆ ಕ್ವಾರಂಟೈನ್ ವಿನಾಯಿತಿ?

Update: 2021-07-08 18:35 GMT

ಲಂಡನ್, ಜು. 8: ಮಧ್ಯಮ ಅಪಾಯದ ದೇಶಗಳಿಂದ ಬ್ರಿಟನ್ಗೆ ಹಿಂದಿರುಗುವ ಪ್ರಯಾಣಿಕರು ಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಹಾಕಿಕೊಂಡಿದ್ದರೆ ಅವರಿಗೆ ಕ್ವಾರಂಟೈನ್ನಿಂದ ವಿನಾಯಿತಿ ನೀಡಲು ಬ್ರಿಟನ್ ಮುಂದಾಗಿದೆ. ಈ ಕುರಿತ ವಿವರಗಳನ್ನು ದೇಶದ ಸಾರಿಗೆ ಸಚಿವ ಗ್ರಾಂಟ್ ಶಾಪ್ಸ್ ಶೀಘ್ರವೇ ಬಿಡುಗಡೆಗೊಳಿಸಲಿದ್ದಾರೆ.

ಹಾಲಿ ನಿಯಮಗಳ ಪ್ರಕಾರ, ಸ್ಪೇನ್, ಫ್ರಾನ್ಸ್, ಅಮೆರಿಕ ಮತ್ತು ಇಟಲಿ ಮುಂತಾದ ಪ್ರಮುಖ ದೇಶಗಳಿಂದ ಬರುವ ಪ್ರಯಾಣಿಕರು 10 ದಿನಗಳ ಕಾಲ ಕ್ವಾರಂಟೈನ್ ಗೆ ಒಳಗಾಗಬೇಕಾಗಿದೆ. ಹಾಗಾಗಿ, ಜನರು ಬ್ರಿಟನ್ ಗೆ ಪ್ರಯಾಣಿಸಲು ಹಿಂದೇಟು ಹಾಕಿದ್ದರು.

ಇನ್ನು ಮುಂದೆ ಎರಡೂ ಡೋಸ್ ಲಸಿಕೆ ತೆಗೆದುಕೊಂಡಿರುವವರು ವಿದೇಶಗಳಿಂದ ಬ್ರಿಟನ್ಗೆ ಹಿಂದಿರುಗಬಹುದಾಗಿದೆ ಹಾಗೂ ಅವರು ಕ್ವಾರಂಟೈನ್ ಗೆ ಒಳಗಾಗಬೇಕಾಗಿಲ್ಲ ಎನ್ನಲಾಗಿದೆ. ಬ್ರಿಟನ್ನಲ್ಲಿ ಸುಮಾರು 65 ಶೇಕಡ ವಯಸ್ಕರಿಗೆ ಸಂಪೂರ್ಣ ಲಸಿಕೆ ಹಾಕಲಾಗಿದೆ.
ಸಾಂಕ್ರಾಮಿಕ ಅವಧಿಯಲ್ಲಿ ಬ್ರಿಟನ್ ನ ಪ್ರವಾಸೋದ್ಯಮ ಸಂಪೂರ್ಣವಾಗಿ ಸೊರಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News