ಅಫ್ಘಾನ್ ನಲ್ಲಿ ಪ್ರಭಾವ ಬೀರಲು ಭಾರತ ಯತ್ನ: ಪಾಕ್ ಟೀಕೆ

Update: 2021-07-11 19:05 GMT

ಇಸ್ಲಾಮಾಬಾದ್, ಜು.11: ಪಾಕಿಸ್ತಾನದ ಹಿತಾಸಕ್ತಿಳಿಗೆ ಹಾನಿ ಮಾಡುವ ಉದ್ದೇಶದಿಂದಲೇ ಭಾರತವು ಅಫ್ಘಾನಿಸ್ತಾನದಲ್ಲಿ ತನ್ನ ಪ್ರಭಾವವನ್ನು ಬೀರಲು ಯತ್ನಿಸುತ್ತಿದೆಯೆಂದು ಪಾಕ್ ನ ಸೇನಾ ವಕ್ತಾರ ಬಾಬರ್ ಇಫ್ತಿಕಾರ್ ಆರೋಪಿಸಿದ್ದಾರೆ.ಅಫ್ಘಾನಿಸ್ತಾನ ವಿದ್ಯಮಾನಗಳಲ್ಲಿ ಭಾರತ ಪಾತ್ರ ವಹಿಸುತ್ತಿರುವುದನ್ನು ಅವರು ಟೀಕಿಸಿದ್ದಾರೆ.

ನೆರೆಯ ರಾಷ್ಟ್ರವಾದ ಅಫ್ಘಾನಿಸ್ತಾನದಲ್ಲಿ ನಾಗರಿಕ ಸಮರ ವೇನಾದರೂ ನಡೆದಲ್ಲಿ ಅದರ ಪರಿಣಾಮಗಳನ್ನು ನಿಭಾಯಿಸಲು ಪಾಕಿಸ್ತಾನವು ಸಿದ್ಧವಾಗಿದೆ ಎಂದವರು ಹೇಳಿದ್ದಾರೆ. ಅಫ್ಘಾನ್ ಶಾಂತಿ ಪ್ರಕ್ರಿಯೆಯಲ್ಲಿ ಪಾಕಿಸ್ತಾನವು ಸಂಧಾನಕಾರನ ಪಾತ್ರವನ್ನು ನಿರ್ವಹಿಸುತ್ತದೆಯೇ ಹೊರತು ಖಾತರಿದಾರ ನಾಗಲಾರದು ಎಂದು ಹೇಳಿದ ಇಫ್ತಿಕಾರ್ ಅವರು, ಅಫ್ಘಾನಿಸ್ತಾನದ ನಾಯಕತ್ವವನ್ನು ಅಫ್ಘನ್ನರೇ ಆಯ್ಕೆ ಮಾಡಬೇಕೆಂದು ಕರೆ ನೀಡಿದರು.
  
ತಾಲಿಬಾನ್ ಅಫ್ಘಾನಿಸ್ತಾನದ ಗಡಿಪ್ರದೇಶದ ಭದ್ರತೆಯನ್ನು ಬಿಗಿಗೊಳಿಸ ಲಾಗಿದೆಯೆಂದು ಹೇಳಿದರು. ಅಫ್ಘಾನ್ ಜೊತೆಗಿನ 2611 ಕಿ.ಮೀ. ವಿಸ್ತೀರ್ಣದ ಗಡಿಪ್ರದೇಶದ ಶೇ.90ಕ್ಕಿಂತಲೂ ಅಧಿಕ ಭಾಗದಲ್ಲಿ ತಂತಿಬೇಲಿಯನ್ನು ಸ್ಥಾಪಿಸಲಾಗಿದೆಯೆಂದು ಅವರು ತಿಳಿಸಿದರು.
 
ತಾಲಿಬಾನ್ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದೊಳಗೆ ಅಫ್ಘಾನ್ ನಿರಾಶ್ರಿತರ ಪ್ರವಾಹವೇ ಹರಿದುಬರುವ ಸಾಧ್ಯತೆಯಿದೆಯೆಂದು ಆತಂಕ ವ್ಯಕ್ತಡಿಸಿದರು.
ಅಮೆರಿಕವು ಕೋಟಿಗಟ್ಟಲೆ ಡಾಲರ್ ಸುರಿದು ಅಫ್ಘಾನ್ ಪಡೆಗಳನ್ನು ತರಬೇತುಗೊಳಿಸಿದೆಯಾದರೂ, ಈವರೆಗೆ ಅವರು ತಾಲಿಬಾನ್ ವಿರುದ್ಧ ಬಲವಾದ ಪ್ರತಿರೋಧವನ್ನು ತೋರಿಸಲು ವಿಫಲವಾಗಿದೆಯೆಂದು ಇಫ್ತಿಕಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News