ಇಂಗ್ಲೆಂಡ್ ನಲ್ಲಿರುವ ಟೀಮ್ ಇಂಡಿಯಾದ ಸಿಬ್ಬಂದಿಗೂ ಕೊರೋನ ಪಾಸಿಟಿವ್

Update: 2021-07-15 12:56 GMT

ಲಂಡನ್: ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಸೋಂಕಿಗೆ ಒಳಗಾದ ಕೆಲವೇ ಗಂಟೆಗಳ ಬಳಿಕ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪ್ರಸ್ತುತ ಇಂಗ್ಲೆಂಡ್‌ನಲ್ಲಿರುವ ಭಾರತೀಯ ಟೆಸ್ಟ್ ತಂಡದ ಸಿಬ್ಬಂದಿಯೊಬ್ಬರಿಗೂ  ಕೋವಿಡ್ -19 ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಮೂಲಗಳನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.

  ಈ ಬೆಳವಣಿಗೆಯಿಂದಾಗಿ ತಂಡದ ಮೂವರು ಕೋಚಿಂಗ್ ಸಹಾಯಕರನ್ನು ಕ್ವಾರಂಟೈನ್ ಮಾಡಲಾಗಿದೆ ಹಾಗೂ  ಪಂತ್ ಸಹಿತ ನಾಲ್ವರು ಅಭ್ಯಾಸ ಪಂದ್ಯಕ್ಕಾಗಿ ತಂಡದೊಂದಿಗೆ ಡರ್ಹಾಮ್‌ಗೆ ಪ್ರಯಾಣಿಸುವುದಿಲ್ಲ. ಆಗಸ್ಟ್ 4 ರಂದು ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯುವ ಮೊದಲ ಟೆಸ್ಟ್  ಗೆ ಮೊದಲು  ಕೋವಿಡ್-19 ಪ್ರಕರಣಗಳು ವರದಿಯಾಗಿವೆ. 

ಜೂನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುನ್ನ ಇಂಗ್ಲೆಂಡ್ ಗೆ ಬಂದಿರುವ ಭಾರತೀಯ ಟೆಸ್ಟ್ ತಂಡ ಈಗ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಇಂಗ್ಲೆಂಡ್‌ನಲ್ಲಿದೆ.

ಫೈನಲ್ ನಂತರ ತಂಡದ ಸದಸ್ಯರು ವಿರಾಮಕ್ಕಾಗಿ ತೆರಳಿದ್ದರು.   ಡರ್ಹಾಮ್ ನಲ್ಲಿ ಅಭ್ಯಾಸ ಪಂದ್ಯಕ್ಕಿಂತ ಮುಂಚಿತವಾಗಿ ಒಟ್ಟುಗೂಡುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News