ಸಂವಿಧಾನದ 97ನೇ ತಿದ್ದುಪಡಿ ರದ್ದುಗೊಳಿಸಿ ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್

Update: 2021-07-20 17:23 GMT

ಹೊಸದಿಲ್ಲಿ, ಜು.20: ಸಹಕಾರಿ ಸಂಘಗಳ ಪರಿಣಾಮಕಾರಿ ನಿರ್ವಹಣೆಗೆ ಸಂಬಂಧಿಸಿದ ಸಂವಿಧಾನದ 97ನೇ ತಿದ್ದುಪಡಿಯ 9ಬಿ ಭಾಗವನ್ನು ರದ್ದುಪಡಿಸಿ ಸುಪ್ರೀಂಕೋರ್ಟ್ ಮಂಗಳವಾರ ಆದೇಶ ಹೊರಡಿಸಿದ್ದು, ರಾಜ್ಯಗಳಿಗೆ ದೊಡ್ಡ ಗೆಲುವು ದೊರೆತಿದೆ.
 
ಸಹಕಾರಿ ಸಂಘಗಳ ನಿರ್ವಹಣೆಯು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಹೀಗಾಗಿ ಸಹಕಾರಿ ಸಂಘಗಳುಗೆ ಸಂಬಂಧಿಸಿದ ಕಾನೂನುಗಳನ್ನು ರೂಪಿಸಲು ಸಂಸತ್ಗೆ ಅಧಿಕಾರವಿಲ್ಲವೆಂದು ಪ್ರತಿಪಾದಿಸಿ ಗುಜರಾತ್ ಹೈಕೋರ್ಟ್, ಕೇಂದ್ರ ಸರಕಾರವು ಸಂವಿಧಾನದ 97ನೇ ತಿದ್ದುಪಡಿಯ ಕೆಲವು ನಿಯಮಗಳನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
  
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಎಫ್.ನರೀಮನ್, ಕೆ.ಎಂ.ಜೋಸೆಫ್ ಹಾಗೂ ಬಿ.ಆರ್.ಗಾವಳಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಗುಜರಾತ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ.
 
2011ರ ಡಿಸೆಂಬರ್ನಲ್ಲಿ ಸಂವಿಧಾನದ 97ನೇ ತಿದ್ದುಪಡಿ ಕಾಯ್ದೆಯನ್ನು ಸಂಸತ್ ಅಂಗೀಕರಿಸಿತ್ತು ಹಾಗೂ ಅದು 2012ರ ಫೆಬ್ರವರಿ 15ರಿಂದ ಜಾರಿಗೆ ಬಂದಿತ್ತು.
 
ಸಹಕಾರಿ ಸಂಘಗಳಿಗೆ ರಕ್ಷಣೆನ್ನು ಒದಗಿಸುವುದಕಾಗಿ ಸಂವಿಧಾನದ 19 (1) ವಿಧಿಗೆ ತಿದ್ದುಪಡಿ ಮಾಡಲಾಗಿತ್ತು ಹಾಗೂ ಭಾಗ 9ಬಿಯನ್ನು ಅಳವಡಿಸಲಾಗಿತ್ತು.
  
ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಭಾಗ9 ಬಿಯ ಆಳವಡಿಕೆಯು ರಾಜ್ಯಸರಕಾರಗಳಿಗೆ ಸಹಕಾರಿ ಸಂಘಗಳ ನಿರ್ವಹಣೆಯ ಮೇಲಿರುವ ವಿಶೇಷ ಅಧಿಕಾರವನ್ನು ಕಸಿದುಕೊಳ್ಳುತ್ತದೆಯೇ ಎಂಬುದನ್ನು ಪರಿಶೀಲಿಸಿತು.

ಕೇಂದ್ರ ಸರಕಾರದ ಪರವಾಗಿ ವಾದಿಸಿದ್ದು ಅಟಾರ್ನಿ ಜನರಲ್ ವೇಣುಗೋಪಾಲ್ ಅವರು, ಸಂವಿಧಾನದ 97ನೇ ತಿದ್ದುಪಡಿಯು, ಸಹಕಾರಿ ಸಂಘಗಳಗೆ ಸಂಬಂಧಿಸಿ ಕಾನೂನುಗಳನ್ನು ರೂಪಿಸುವ ರಾಜ್ಯಗಳ ಅಧಿಕಾರದ ಮೇಲೆ ನಡೆದ ನೇರ ದಾಳಿಯೆಂಬ ವಾದವನ್ನು ತಳ್ಳಿಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News