ಸ್ಫೋಟ ತನಿಖೆಗೆ ತನಿಖಾಧಿಕಾರಿಗಳನ್ನು ಪಾಕ್ ಗೆ ಕಳುಹಿಸಿದ ಚೀನಾ

Update: 2021-07-20 16:34 GMT

ಬೀಜಿಂಗ್, ಜು. 20: ಇತ್ತೀಚೆಗೆ ಪಾಕಿಸ್ತಾನದ ಬಸ್ಸೊಂದರಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ತನಿಖೆ ನಡೆಸಲು ತನಿಖಾಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿರುವುದಾಗಿ ಚೀನಾ ಹೇಳಿದೆ. ಸ್ಫೋಟದಲ್ಲಿ 9 ಚೀನೀ ಇಂಜಿನಿಯರ್ಗಳು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ.

ಸ್ಫೋಟವು ಭಯೋತ್ಪಾದಕ ದಾಳಿಯಾಗಿದೆ ಎಂಬುದಾಗಿಯೂ ಚೀನಾ ಆರೋಪಿಸಿದೆ.

ಕಳೆದ ಬುಧವಾರ ಬಸ್ಸಿನಲ್ಲಿ ಸುಮಾರು 40 ಚೀನೀ ಇಂಜಿನಿಯರ್ಗಳು, ಸರ್ವೇಯರ್ಗಳು ಮತ್ತು ಮೆಕಾನಿಲ್ ಸಿಬ್ಬಂದಿ ಖೈಬರ್ ಪಖ್ತೂನ್ಖ್ವ ರಾಜ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಲವಿದ್ಯುತ್ ಅಣೆಯಕಟ್ಟು ನಿರ್ಮಾಣ ಸ್ಥಳಕ್ಕೆ ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ.
ಸ್ಫೋಟದಲ್ಲಿ ಇತರ ಮೂವರು ಪಾಕಿಸ್ತಾನೀಯರು ಮೃತಪಟ್ಟಿದ್ದು, 28 ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News