ಅಮೃತಸರದಲ್ಲಿ ಶಕ್ತಿ ಪ್ರದರ್ಶಿಸಿದ ಪಂಜಾಬ್ ಕಾಂಗ್ರೆಸ್ ನೂತನ ಅಧ್ಯಕ್ಷ ನವಜೋತ್ ಸಿಧು

Update: 2021-07-21 13:13 GMT
photo: INDIA TV

ಹೊಸದಿಲ್ಲಿ: ಹೊಸದಾಗಿ ನೇಮಕಗೊಂಡಿರುವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು  ಪಕ್ಷದ 62 ಶಾಸಕರಿಗೆ ಅಮೃತಸರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಆತಿಥ್ಯ ನೀಡಿದರು.

ಸಿಧು ಹಾಗೂ  ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಡುವಿನ ಭಿನ್ನಾಭಿಪ್ರಾಯದ ಮಧ್ಯೆ ಈ ಸಭೆ ಮಹತ್ವವನ್ನು ಪಡೆದುಕೊಂಡಿದೆ.  ಸಿಂಗ್ ಅವರು ಸಿಧು ಅವರಿಗೆ ಭಡ್ತಿ ನೀಡುವುದನ್ನುತೀವ್ರವಾಗಿ ವಿರೋಧಿಸಿದ್ದರು.

ಸಿಧು ಅವರ ಮನೆಗೆ ತೆರಳಿದ್ದ  ಪ್ರಮುಖ ಸಚಿವರಲ್ಲಿ ಸುಖಜೀಂದರ್ ಸಿಂಗ್ ರಾಂಧವಾ, ಟ್ರಿಪ್ಟ್ ರಾಜಿಂದರ್ ಸಿಂಗ್ ಬಜ್ವಾ, ಚರಣಜಿತ್ ಸಿಂಗ್ ಚನ್ನಿ ಹಾಗೂ  ಸುಖಬಿಂದರ್ ಸಿಂಗ್ ಸರ್ಕರಿಯಾ ಜೊತೆಗೆ ನಿರ್ಗಮನ ರಾಜ್ಯ ಘಟಕದ ಮುಖ್ಯಸ್ಥ ಸುನೀಲ್ ಜಾಖರ್ ಸೇರಿದ್ದಾರೆ. ಪಕ್ಷದ ಹಲವು ಜಿಲ್ಲಾಧ್ಯಕ್ಷರು ಹಾಗೂ ಹಲವು ಪ್ರಮುಖ ಕಾಂಗ್ರೆಸ್ ನಾಯಕರು ಸಿಧು ಮನೆಯಲ್ಲಿ  ಹಾಜರಿದ್ದರು.

ಪಂಜಾಬ್‌ನ 80 ಕಾಂಗ್ರೆಸ್ ಶಾಸಕರಲ್ಲಿ ಕೇವಲ 18 ಶಾಸಕರು  ಮಾತ್ರ ಸಿಧು ಸಭೆಯಿಂದ ದೂರ ಉಳಿದಿದ್ದರು.

ಸಭೆಯ ನಂತರ ಸಿಧು ಅವರು ಶಾಸಕರೊಂದಿಗೆ ಐಷಾರಾಮಿ ಬಸ್‌ಗಳಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಹೋದರು. ಅಲ್ಲಿ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಬೆಂಬಲಿಗರು ನೆರೆದಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ತನ್ನ ವಿರುದ್ದ ಅವಹೇಳನಕಾರಿ ಟ್ವೀಟ್ ಗಳನ್ನು ಮಾಡಿರುವುದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸುವ ತನಕ ಸಿಧು ಅವರನ್ನು  ಅಮರಿಂದರ್ ಭೇಟಿಯಾಗುವುದಿಲ್ಲ ಎಂದು ಪಂಜಾಬ್ ಸಿಎಂ ಸಲಹೆಗಾರರು ಮಂಗಳವಾರ ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News