ಜಂತರ್ ಮಂತರ್‌ನಲ್ಲಿ ಗುರುವಾರ ರೈತರ ಪ್ರತಿಭಟನೆಗೆ ದಿಲ್ಲಿ ಸರಕಾರ ಸಮ್ಮತಿ: ವರದಿ

Update: 2021-07-21 13:36 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದಿಲ್ಲಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ಸರಕಾರವು ನಾಳೆ ಜಂತರ್ ಮಂತರ್ ನಲ್ಲಿ ಕಿಸಾನ್ ಸಂಸದ್ - ರೈತರ ಸಂಸತ್ತು ನಡೆಸಲು ರೈತ ಸಂಘಟನೆಗಳಿಗೆ ಅನುಮತಿ ನೀಡಿದೆ.  ಆದರೆ  ಎಲ್ಲರೂ ಕೋವಿಡ್ ಪ್ರೋಟೋಕಾಲ್ ಅನ್ನು ಪಾಲಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಕೂಡ ಪ್ರತಿಭಟನೆಗೆ ಸಮ್ಮತಿ ನೀಡಿದ್ದಾರೆ. ಜನವರಿ 26 ರಂತೆ ಪರಿಸ್ಥಿತಿ ಕೈ ಮೀರಿ ಹೋಗದಂತೆ  ತಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಾಷ್ಟ್ರ ರಾಜಧಾನಿಯ ಸಿಂಘು ಗಡಿ ಭಾಗದಿಂದ ಸಂಸತ್ತಿನ ಕಡೆಗೆ ಪ್ರತಿದಿನ 200 ಗುಂಪುಗಳಾಗಿ ಮೆರವಣಿಗೆ ನಡೆಸಲು ರೈತರು ಮೊದಲು ಯೋಜಿಸಿದ್ದರು. ನಂತರ ಪೊಲೀಸರು ಅವರ ಆಂದೋಲನವನ್ನು ಸ್ಥಳದಲ್ಲೇ ಮುಂದುವರಿಸಲು ಸೂಚಿಸಿದ್ದರು.

ಪ್ರತಿಭಟನೆಗೆ ಅನುಕೂಲವಾಗುವಂತೆ ದಿಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ (ಡಿಡಿಎಂಎ) ಅಡಿಯಲ್ಲಿ ಕೋವಿಡ್ ನಿರ್ಬಂಧಗಳನ್ನು ವಿಧಿಸುವ ಆದೇಶದಲ್ಲಿ ರಾಜ್ಯ ಸರಕಾರ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಡಿಡಿಎಂಎ ಮಾರ್ಗಸೂಚಿಗಳು ಯಾವುದೇ ಸಭೆ-ಕೂಟಗಳನ್ನು ಅನುಮತಿಸುವುದಿಲ್ಲ.

2020 ರ ನವೆಂಬರ್‌ನಲ್ಲಿ ರೂಪುಗೊಂಡ ದೇಶಾದ್ಯಂತದ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಾಳೆ ಜಂತರ್ ಮಂತರ್‌ನಲ್ಲಿ ಕಿಸಾನ್ ಸಂಸದ್‌ನ ಕಾರ್ಯತಂತ್ರವನ್ನು ರೂಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News