×
Ad

ಭ್ರಷ್ಟಾಚಾರ ಆರೋಪ: ಸಚಿವೆ ಶಶಿಕಲಾ ಜೊಲ್ಲೆ ನಿವಾಸಕ್ಕೆ ಮೊಟ್ಟೆ ಎಸೆದು ಪ್ರತಿಭಟನೆ

Update: 2021-07-24 13:55 IST

ಬೆಂಗಳೂರು, ಜು.24: ಮಾತೃಪೂರ್ಣ ಯೋಜನೆ ಅಡಿ ಮೊಟ್ಟೆ ಹಂಚಿಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಆರೋಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ನಿವಾಸಕ್ಕೆ ಮೊಟ್ಟೆಗಳನ್ನು ಎಸೆದು ಪ್ರತಿಭಟನೆ ನಡೆಸಲಾಯಿತು.

ಶನಿವಾರ ಇಲ್ಲಿನ ಜೆಸಿ ನಗರ ರಸ್ತೆಯಲ್ಲಿರುವ‌ ಶಶಿಕಲಾ ಜೊಲ್ಲೆ ಅವರ ಅಧಿಕೃತ ನಿವಾಸದ ಬಳಿ ಜಮಾಯಿಸಿದ ಎನ್‌ಎಸ್‌ಯುಐ ಕಾರ್ಯಕರ್ತರು ಎಂದು ಗುರುತಿಸಲಾದ ತಂಡ ಪ್ರವೇಶ ದ್ವಾರಕ್ಕೆ ಮೊಟ್ಟೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರ. ಜನವಿರೋಧಿ ಸರ್ಕಾರವಾಗಿದ್ದು, ಬಡ ಶಾಲಾ ಮಕ್ಕಳ ಮೊಟ್ಟೆ ಖರೀದಿಯಲ್ಲಿ ಲಂಚ ಬೇಡಿಕೆ ಇಟ್ಟಿರುವ ಸಚಿವೆ ಶಶಿಕಲಾ ಜೊಲ್ಲೆ , ಈ ಕೂಡಲೆ ರಾಜಿನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮೊಟ್ಟೆ ಖರೀದಿ ಅವ್ಯವಹಾರ ನ್ಯಾಯಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News