ಒಲಿಂಪಿಕ್ಸ್: ಬಿಲ್ಗಾರಿಕೆಯಲ್ಲಿ ಭಾರತದ ದೀಪಿಕಾ ಎಂಟರ ಘಟ್ಟಕ್ಕೆ

Update: 2021-07-30 06:22 GMT
(Photo : twitter)

ಟೋಕಿಯೊ: ಭಾರತದ ಖ್ಯಾತ ಬಿಲ್ಗಾರ್ತಿ ದೀಪಿಕಾ ಕುಮಾರಿ ವೈಯಕ್ತಿಕ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ರಷ್ಯಾದ ಕ್ಸೇನಿಯಾ ಪೆರೋವಾ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ರಷ್ಯನ್ ಸ್ಪರ್ಧಿ ವಿರುದ್ಧ 6-5 ಸೆಟ್‌ಗಳಿಂದ ದೀಪಿಕಾ ಜಯ ಸಾಧಿಸಿದರು. ದೀಪಿಕಾ ಹಾಗೂ ಪೆರೋವಾ ತಲಾ ಐದು ಸೆಟ್ ಗೆದ್ದ ಹಿನ್ನೆಲೆಯಲ್ಲಿ ಶೂಟ್ ಆಫ್ ಮೂಲಕ ವಿಜೇತರನ್ನು ನಿರ್ಣಯಿಸಲಾಯಿತು.

ಮುಂದಿನ ಸುತ್ತಿನಲ್ಲಿ ಅವರು ಕೊರಿಯಾದ ಆನ್ ಸಾನ್ ವಿರುದ್ಧ ಸೆಣೆಸಲಿದ್ದಾರೆ. ಸಾನ್ ಅವರು ಈಗಾಗಲೇ ಟೋಕಿಯೋದಲ್ಲಿ ಎರಡು ಚಿನ್ನ ಗೆದ್ದಿದ್ದು, ಮಹಿಳೆಯರ ತಂಡ ಸ್ಪರ್ಧೆ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಬಂಗಾರದ ಪದಕ ಜಯಿಸಿದ್ದಾರೆ.

ರಾಷ್ಟ್ರೀಯ ದಾಖಲೆ: 3000 ಮೀಟರ್ ಸ್ಟೀಪಲ್‌ ಚೇಸ್‌ನಲ್ಲಿ ಭಾರತದ ಅಥ್ಲೀಟ್ ಅವಿನಾಶ್ ಸಬಲ್ ಹೊಸ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರೂ ಫೈನಲ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ಅವಿನಾಶ್ ಹೀಟ್ಸ್‌ನಲ್ಲಿ ಏಳನೇ ಸ್ಥಾನ ಪಡೆದರು. ಮೊದಲ ಆರು ಸ್ಥಾನ ಪಡೆದ ಸ್ಪರ್ಧಿಗಳು ಫೈನಲ್‌ಗೆ ನೇರ ಅರ್ಹತೆ ಪಡೆಯುತ್ತಾರೆ. ಕೂದಲೆಳೆ ಅಂತರದಿಂದ ಅವಿನಾಶ್ ಫೈನಲ್ ತಲುಪುವ ಅವಕಾಶದಿಂದ ವಂಚಿತರಾದರು. 8:18.12 ನಿಮಿಷಗಳಲ್ಲಿ ಗುರಿ ತಲುಪಿದ ಅವರು ಒಟ್ಟಾರೆ 44 ಅಥ್ಲೀಟ್‌ಗಳ ಪೈಕಿ 13ನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News