​ವಿಶ್ವದ ಮೊಟ್ಟಮೊದಲ ಸಾಫ್ಟ್‌ವೇರ್ ವ್ಯಾಖ್ಯಾನಿತ ಉಪಗ್ರಹ ನಭಕ್ಕೆ

Update: 2021-07-31 04:07 GMT
Photo credit: Twitter@esa

ಫ್ರೆಂಚ್‌ಗಯಾನ, ಜು.31: ವಿಶ್ವದ ಮೊಟ್ಟಮೊದಲ ಸಾಫ್ಟ್‌ವೇರ್ ವ್ಯಾಖ್ಯಾನಿತ ಮತ್ತು ಮರು ಪ್ರೋಗ್ರಾಂ ಮಾಡಬಹುದಾದ ಉಪಗ್ರಹ ಯುಟೆಲ್‌ಸ್ಯಾಟ್ ಕ್ವಾಂಟಮ್ ಅನ್ನು ಶುಕ್ರವಾರ ಫ್ರೆಂಚ್ ಗಯಾನಾದ ಏರಿಯನ್ 5 ರಾಕೆಟ್ ಮೂಲಕ ಉಡಾಯಿಸಲಾಯಿತು. ಇದು ಮತ್ತಷ್ಟು ಸ್ಥಿತಿಸ್ಥಾಪಕತ್ವದ ಸಂವಹನದ ನಿರೀಕ್ಷೆಗೆ ಕಾರಣವಾಗಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ) ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಯುಟೆಲ್‌ಸ್ಯಾಟ್ ಕ್ವಾಂಟಮ್ ಉಡಾವಣೆಯ ಚಿತ್ರವನ್ನು ಪೋಸ್ಟ್ ಮಾಡಿದ್ದು, ಇದು ವಿಶ್ವದ ಮೊಟ್ಟಮೊದಲ ಸಂಪೂರ್ಣ ಸ್ಥಿತಿಸ್ಥಾಪಕತ್ವದ ಸಾಫ್ಟ್‌ವೇರ್ ವ್ಯಾಖ್ಯಾನಿತ ವಾಣಿಜ್ಯ ಉಪಗ್ರಹವಾಗಿದೆ ಎಂದು ಹೇಳಿದೆ.
ಉಡಾವಣೆಯ 36 ನಿಮಿಷಗಳ ಬಳಿಕ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು.

"ಯುಟೆಲ್‌ಸ್ಯಾಟ್ ಕ್ವಾಂಟಮ್ ಉಪಗ್ರಹವನ್ನು ಇಎಸ್‌ಎ ಪಾಲುದಾರಿಕೆ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು, ಉಪಗ್ರಹ ಆಪರೇಟರ್ ಯುಟೆಲ್‌ಸ್ಯಾಟ್ ಮತ್ತು ಪ್ರಮುಖ ಉತ್ಪಾದನಾ ಸಂಸ್ಥೆಯಾದ ಏರ್‌ಬಸ್ ಇದನ್ನು ಅಭಿವೃದ್ಧಿಪಡಿಸಿವೆ. ಇದು ಇದು ವಿಶ್ವದ ಮೊಟ್ಟಮೊದಲ ಸಂಪೂರ್ಣ ಸ್ಥಿತಿಸ್ಥಾಪಕತ್ವದ ಸಾಫ್ಟ್‌ವೇರ್ ವ್ಯಾಖ್ಯಾನಿತ ವಾಣಿಜ್ಯ ಉಪಗ್ರಹವಾಗಿದೆ ಎಂದು ಸಂಸ್ಥೆ ಪ್ರಕಟಿಸಿದೆ.

"ಇದನ್ನು ಕಕ್ಷೆಯಲ್ಲೇ ಮರು ಪ್ರೋಗ್ರಾಮಿಂಗ್ ಮಾಡಲು ಅವಕಾಶವಿದ್ದು, ಡಾಟಾ ವರ್ಗಾವಣೆಯ ಸಂಬಂಧ ಬದಲಾಗುತ್ತಿರುವ ಬೇಡಿಕೆಗೆ ಅನುಗುಣವಾಗಿ ಇದು ಸೂಕ್ತವಾಗಿ ಸ್ಪಂದಿಸಲಿದೆ. 15 ವರ್ಷಗಳ ಜೀವಿತಾವಧಿಯಲ್ಲಿ ಸುರಕ್ಷಿತ ಸಂವಹನದ ಖಾತರಿ ನೀಡಲಿದೆ ಎಂದು ವಿವರಿಸಲಾಗಿದೆ. ಇದರ ಕಿರಣಗಳನ್ನು ರಿಯಲ್‌ಟೈಮ್‌ನಲ್ಲಿ ಚಲಿಸುವಂತೆ ಮರುನಿರ್ದೇಶಿಸಲು ಅವಕಾಶವಿದ್ದು, ಈ ಮೂಲಕ ಚಲಿಸುವ ಹಡಗು ಮತ್ತು ವಿಮಾನಗಳ ಪ್ರಯಾಣಿಕರಿಗೆ ಮಾಹಿತಿಯನ್ನು ಸುಲಭವಾಗಿ ನೀಡಬಹುದಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News