ಒಲಿಂಪಿಕ್ಸ್ : ಭಾರತದ ಮಹಿಳಾ ಹಾಕಿ ತಂಡ ಮೊದಲ ಬಾರಿ ಸೆಮಿ ಫೈನಲ್ ಗೆ

Update: 2021-08-02 04:58 GMT
Photo: PTI

ಟೋಕಿಯೊ: ವಿಶ್ವದ ನಂ.2ನೇ ಶ್ರೇಯಾಂಕದ  ಆಸ್ಟ್ರೇಲಿಯ ತಂಡವನ್ನು 1-0 ಗೋಲು ಅಂತರದಿಂದ ಮಣಿಸಿ ಆಘಾತ ನೀಡಿರುವ ಭಾರತದ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಸೆಮಿಫೈನಲ್ ಗೆ ತಲುಪಿ ಇತಿಹಾಸ ನಿರ್ಮಿಸಿದೆ.

ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್ ನಲ್ಲಿ ಗಳಿಸಿದ ಏಕೈಕ ಗೋಲು ನೆರವಿನಿಂದ ಭಾರತ ಮೊದಲಾರ್ಧದಲ್ಲಿ 1-0 ಮುನ್ನಡೆ ಸಾಧಿಸಿದ್ದು, ಕೊನೆಯ ತನಕ ಈ ಮುನ್ನಡೆ ಕಾಯ್ದುಕೊಂಡಿದೆ.

ಮೂರನೇ ಬಾರಿ ಒಲಿಂಪಿಕ್ಸ್ ನಲ್ಲಿ ಆಡುತ್ತಿರುವ ಭಾರತದ ಮಹಿಳಾ ಹಾಕಿ ತಂಡ ಮೊದಲ ಬಾರಿ ಸೆಮಿ ಫೈನಲ್ ತಲುಪಿ ಇತಿಹಾಸ ರಚಿಸಿತು. 1980 ಹಾಗೂ 2016ರ ಒಲಿಂಪಿಕ್ಸ್ ನಲ್ಲಿ ಮಹಿಳಾ ತಂಡ ಭಾಗವಹಿಸಿತ್ತು.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಪುರುಷರ ಹಾಗೂ ಮಹಿಳಾ ಎರಡೂ ಹಾಕಿ ತಂಡಗಳು ಸೆಮಿ ಫೈನಲ್ ತಲುಪಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News