ಸಚಿವ ಸಂಪುಟ ರಚನೆ ಕಸರತ್ತು: ಸಂಭಾವ್ಯ ಸಚಿವರ ಪಟ್ಟಿ ಪ್ರಕಟ?
Update: 2021-08-02 14:02 IST
ಬೆಂಗಳೂರು, ಆ.2: ಸಚಿವ ಸಂಪುಟ ರಚನೆಗೆ ಸಂಬಂಧಿಸಿ ಪಕ್ಷದ ವರಿಷ್ಠರ ಭೇಟಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ತೆರಳಿರುವ ಬೆನ್ನಲ್ಲೆ ಸಚಿವರ ಸಂಭಾವ್ಯ ಪಟ್ಟಿಯೊಂದು ಹರಿದಾಡುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು -ಗೃಹ ಖಾತೆಯನ್ನು ತನ್ನಲ್ಲೆ ಉಳಿಸಿಕೊಳ್ಳಲಿದ್ದರೆ ಎನ್ನಲಾಗುತ್ತಿದ್ದು, ಉಪ ಮುಖ್ಯಮಂತ್ರಿಗಳಾಗಿ ಆರ್.ಅಶೋಕ್, ಬಿ.ಶ್ರೀರಾಮುಲು ಸ್ಥಾನ ಪಡೆಯಲಿದ್ದಾರೆ. ಗೋವಿಂದ ಕಾರಜೋಳ ಡಿಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅದೇರೀತಿ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ ಸಚಿವ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ರೇಣುಕಾಚಾರ್ಯ, ಎಸ್.ರಾಮದಾಸ್ ಅವರಿಗೆ ಸಚಿವ ಸ್ಥಾನ ಲಭಿಸಲಿದೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸಂಜೆಯ ವೇಳೆ ಸಚಿವರ ಅಂತಿಮ ಪಟ್ಟಿ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.