ಒಲಿಂಪಿಕ್ಸ್: ಕುಸ್ತಿಪಟು ವಿನೇಶ್ ಫೋಗಟ್ ಗೆ ಸೋಲು

Update: 2021-08-05 05:44 GMT

ಟೋಕಿಯೊ: ಭಾರತದ ಪದಕದ ಭರವಸೆಯಾಗಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್  ಟೋಕಿಯೊ ಒಲಿಂಪಿಕ್ಸ್ ನ ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸುವ ಮೂಲಕ ನಿರಾಸೆಗೊಳಿಸಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ವಿನೇಶ್ ಅವರು ಬೆಲಾರಸ್ ನ ವನೆಸಾ ಕಲಾಡ್ ಝಿನ್ ಸಕಾಯಾ ವಿರುದ್ಧ 3-9 ಅಂತರದಿಂದಸೋತಿದ್ದಾರೆ.

ಇದಕ್ಕೂ ಮೊದಲು ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದಿರುವ ಸೋಫಿಯಾ  ಮ್ಯಾಟ್ಸ್ ನ್ ಅವರನ್ನು 7-1 ಅಂತರದಿಂದ ಸೋಲಿಸಿ ಅಂತಿಮ-8ರ ಸುತ್ತು ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News