ಲಡಾಖ್‍ನಲ್ಲಿ ನಿರ್ಮಾಣಗೊಂಡಿದೆ ಜಗತ್ತಿನ ಅತ್ಯಂತ ಎತ್ತರದ ರಸ್ತೆ

Update: 2021-08-05 07:02 GMT
Photo credit: Twitter/@PIB_India

ಹೊಸದಿಲ್ಲಿ: ಪೂರ್ವ ಲಡಾಖ್‍ನಲ್ಲಿ 19,300 ಅಡಿ ಎತ್ತರದ ಪ್ರದೇಶದಲ್ಲಿ ಗಡಿ ರಸ್ತೆಗಳ ಸಂಘಟನೆ ಜಗತ್ತಿನ ಅತ್ಯಂತ ಎತ್ತರದ ರಸ್ತೆಯನ್ನು ನಿರ್ಮಿಸಿದೆ. ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‍ಗಳಿಗಿಂತಲೂ ಎತ್ತರದಲ್ಲಿ ಈ ರಸ್ತೆ ನಿರ್ಮಾಣಗೊಂಡಿದೆ. ನೇಪಾಳದಲ್ಲಿರುವ ದಕ್ಷಿಣ ಬೇಸ್ ಕ್ಯಾಂಪ್ 17,598 ಅಡಿ ಎತ್ತರದಲ್ಲಿದ್ದರೆ, ಟಿಬೆಟ್‍ನಲ್ಲಿರುವ ಉತ್ತರ ಬೇಸ್ ಕ್ಯಾಂಪ್ 16,900 ಅಡಿ ಎತ್ತರದಲ್ಲಿದೆ.

ಲಡಾಖ್‍ನ ಉಮ್ಲಿಂಗ್ಲ ಪಾಸ್ ಎಂಬಲ್ಲಿ ನಿರ್ಮಾಣಗೊಂಡಿರುವ 52 ಕಿಮೀ ಉದ್ದದ ರಸ್ತೆಯು ಜಗತ್ತಿನಲ್ಲಿ ಇಲ್ಲಿಯ ತನಕ ಅತ್ಯಂತ ಎತ್ತರದ ರಸ್ತೆ ಎಂದು ಗುರುತಿಸಲಾಗಿದ್ದ ಬೊಲಿವಿಯಾದ 18,953 ಅಡಿ ಎತ್ತರದ ರಸ್ತೆಯನ್ನು ಹಿಂದಿಕ್ಕಿದೆ.

ಈ ರಸ್ತೆಯು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುವುದರ ಜತೆಗೆ ಪ್ರವಾಸೋದ್ಯಮವನ್ನೂ ಉತ್ತೇಜಿಸಲಿದೆ ಎಂದು ಸರಕಾರ ಹೇಳಿದೆ.

ಈ ರಸ್ತೆಯು ಪೂರ್ವ ಲಡಾಖ್‍ನ ಚುಮಾರ್ ಸೆಕ್ಟರ್‍ಗೆ ಸಂಪರ್ಕ ಕಲ್ಪಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News