ಮೇಲ್ಜಾತಿಯ ವ್ಯಕ್ತಿಯ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ ದಲಿತ ಗ್ರಾಮ ಸಹಾಯಕ: ತನಿಖೆಗೆ ಆದೇಶ

Update: 2021-08-08 10:37 GMT

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ದಲಿತ ಗ್ರಾಮ ಸಹಾಯಕರಾದ ಮುತ್ತು ಸ್ವಾಮಿ ಎಂಬವರು ಮೇಲ್ಜಾತಿಗೆ ಸೇರಿದ ವ್ಯಕ್ತಿಯೋರ್ವ ಕಾಲಿಗೆ ಬೀಳುತ್ತಿರುವ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಈ ಹಿನ್ನೆಯಲ್ಲಿ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು timesofindia.com ವರದಿ ಮಾಡಿದೆ.

ಅಣ್ಣೂರು ತಾಲೂಕಿನಲ್ಲಿ ಘಟನೆ ನಡೆದಿದೆ. ೩೮ರ ಹರೆಯದ ಸ್ಥಳೀಯ ವ್ಯಕ್ತಿಯಾಗಿರುವ ಗೋಪಾಲಸ್ವಾಮಿ ಎಂಬವರು ಒಡೇರ್‌ ಪಾಳ್ಯಂನ ಗ್ರಾಂ ಕಚೇರಿಗೆ ಕೆಲ ಭೂ ದಾಖಲೆಗಳನ್ನು ಪರಿಶೀಲಿಸುವ ಸಲುವಾಗಿ ತೆರಳಿದ್ದರು. ಈ ವೇಳೆ ಅವರು ಅಲ್ಲಿನ ಗ್ರಾಮ ಆಡಳಿತಾಧಿಕಾರಿ ಕಲೈಸೆಲ್ವಿಯವರೊಂದಿಗೆ ವಾದಕ್ಕಿಳಿದಿದ್ದರು ಎನ್ನಲಾಗಿದೆ. ಈ ಸಂದರ್ಭ ಸಹಾಯಕ ಅಧಿಕಾರಿ ಮುತ್ತುಸ್ವಾಮಿ ಮಧ್ಯಪ್ರವೇಶಿಸಿದಾಗ, ಅವರ ಜಾತಿಯ ಹೆಸರೆತ್ತಿ ಗೋಪಾಲಸ್ವಾಮಿ ನಿಂದಿಸಿದ್ದರು ಎಂದು ತಿಳಿದು ಬಂದಿದೆ.

 ಬಳಿಕ ಮುತ್ತುಸ್ವಾಮಿ ಗೋಪಾಲಸ್ವಾಮಿಗೆ ಕಪಾಳಮೋಕ್ಷ ಮಾಡಿದ್ದರೆನ್ನಲಾಗಿದೆ. ಆ ನಂತರ ಅವರು "ನಾನು ಹಿಂದೂಗಳನ್ನು ಗೌರವಿಸುತ್ತೇನೆ" ಎಂದು ಗೋಪಾಲಸ್ವಾಮಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವ ವೀಡಿಯೋ ಕೂಡಾ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.ಗೋಪಾಲಸ್ವಾಮಿ ಕ್ಷಮೆ ಸ್ವೀಕರಿಸಿದ್ದು, ತನ್ನ ಭಾಗದಿಂದಲೂ ತಪ್ಪಾಗಿದೆ ಎಂದಿದ್ದರು ಎಂದು indiatoday.in ವರದಿ ಮಾಡಿದೆ.

ಆದರೆ ಶುಕ್ರವಾರ ರಾತ್ರಿ ಗೋಪಾಲಸ್ವಾಮಿ ಕಲೈಸೆಲ್ವಿ ಮತ್ತು ಮುತ್ತುಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News