ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್: ವೀಡಿಯೊ ವೈರಲ್

Update: 2021-08-09 07:36 GMT

ಹೊಸದಿಲ್ಲಿ : ಟೀಮ್ ಇಂಡಿಯಾದ ಕೋಚ್, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು  ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರಿಗೆ ಕನ್ನಡ ಕಲಿಸಿ ಎಲ್ಲರ ಗಮನ ಸೆಳೆದಿದ್ದಾರೆ. ತಾವು ಕನ್ನಡದಲ್ಲಿ ಕೆಲ ಕ್ರಿಕೆಟ್ ಸಂಬಂಧಿ ಪದಗಳನ್ನು ಕಲಿಯುತ್ತಿರುವ ವೀಡಿಯೋವೊಂದನ್ನು ಅಲೆಕ್ಸ್ ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ ಹಾಗೂ ಹೊಸ ಭಾಷೆ ಕಲಿಯುವ ತಮ್ಮ ಹುಮ್ಮಸ್ಸನ್ನು ನೋಡಿ ಕೋಚ್ ರಾಹುಲ್ ದ್ರಾವಿಡ್ ತಮಗೆ ಕನ್ನಡ ಕಲಿಸಿದ್ದಾರೆಂದು ಹೇಳಿಕೊಂಡಿದ್ದಾರೆ.

"ಇಂಗ್ಲೆಂಡ್ ಮತ್ತು ಭಾರತ ತಂಡಗಳು ಆಡುತ್ತಿವೆ ಹಾಗೂ ಭಾರತದ ಅತ್ಯುತ್ತಮ ಕ್ರಿಕೆಟ್ ಪದಗಳನ್ನು ಹುಡುಕುತ್ತಿದ್ದೇನೆ. ನಾವು ಬೆಂಗಳೂರಿಗೆ ಬಂದಿದ್ದೇವೆ ಹಾಗೂ ಕ್ರಿಕೆಟ್‍ನ ಅತ್ಯುತ್ತಮ ಆಟಗಾರರಲ್ಲೊಬ್ಬರಾದವರು ನನಗೆ ಮತ್ತು ನಿಮಗೆ  ತಮ್ಮ ರಾಜ್ಯದ ಭಾಷೆಯ ಒಂದು ಪದವನ್ನು ಕಲಿಸುತ್ತಾರೆ" ಎಂದು ಅಲೆಕ್ಸ್ ವೀಡಿಯೋದಲ್ಲಿ ಹೇಳಿದಾಗ ರಾಹುಲ್ ಅವರಿಗೆ ʼಬೇಗ ಓಡಿʼ ಎಂಬ ಕನ್ನಡ ಪದವನ್ನು ಕಲಿಸುತ್ತಾರೆ. ಆಗ ಅಲೆಕ್ಸ್ ಅವರು ʼಒನ್ ರನ್ʼ ಎಂದು ಹೇಳುತ್ತಾರೆ. ಆಗ ಇಬ್ಬರೂ ನಕ್ಕು ನಂತರ ಕೈಕುಲುಕುತ್ತಾರೆ.

ಈಗಾಗಲೇ ಈ ವೀಡಿಯೋ ವೈರಲ್ ಆಗಿದ್ದು 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಹಾಗೂ ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ.

ಒಂದು ದಿನದ ಹಿಂದೆಯಷ್ಟೇ ಅಲೆಕ್ಸ್ ಅವರು ಇನ್ನೊಂದು ವೀಡಿಯೋ ಪೋಸ್ಟ್ ಮಾಡಿ ಇಂಗ್ಲೆಂಡ್‍ನ ಕ್ರಿಕೆಟ್ ಅಭಿಮಾನಿಗಳಿಗೆ "ಸ್ವಲ್ಪ ಕ್ರಿಕೆಟ್ ಹಿಂದಿ ಹಾಗೂ ತಮಿಳು" ಕಲಿಸುವ ಪ್ರಯತ್ನ ನಡೆಸಿದ್ದಾರೆ.

ಕಳೆದ ವಾರವಷ್ಟೇ ಅವರು ದೋಸೆ ತಿನ್ನುತ್ತಿರುವ ವೀಡಿಯೋ ಪೋಸ್ಟ್ ಮಾಡಿ "ಟ್ವಿಟ್ಟರ್ ನ ಶೇ92ರಷ್ಟು ಮಂದಿ ಹೇಳಿದ್ದು ಸರಿ, ಕೈಯ್ಯಲ್ಲಿಯೇ ತಿಂದರೆ ರುಚಿ ಅದ್ಭುತ, ಮಸಾಲೆ ದೋಸೆ, ಬೊಂಬಾಟ್ ಗುರು, ಏಕ್ ದಮ್ ಮಸ್ತ್,'' ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News