ಹಾಕಿ ಆಟಗಾರ ಶ್ರೀಜೇಶ್ ಗೆ 1 ಕೋ.ರೂ. ಬಹುಮಾನ ಘೋಷಿಸಿದ ಗಲ್ಫ್ ನಲ್ಲಿರುವ ಭಾರತ ಮೂಲದ ಉದ್ಯಮಿ

Update: 2021-08-09 14:33 GMT

ತಿರುವನಂತಪುರ: ಭಾರತದ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಅವರಿಗೆ ಗಲ್ಫ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಯೊಬ್ಬರು 1 ಕೋ.ರೂ. ಬಹುಮಾನ ಘೋಷಿಸಿದ್ದಾರೆ. ಕೇರಳದ ಶ್ರೀಜೇಶ್ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವು ಐತಿಹಾಸಿಕ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದವರಲ್ಲಿ ಒಬ್ಬರಾಗಿದ್ದಾರೆ.

“ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಅವರು ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.  ಅವರ ಕೊಡುಗೆಯನ್ನು ಗಮನಿಸಿ ಅವರಿಗೆ 1 ಕೋಟಿ ರೂ. ಬಹುಮಾನ ಘೋಷಿಸಲು ಸಂತೋಷವಾಗುತ್ತಿದೆ ಎಂದು ವಿಪಿಎಸ್ ಹೆಲ್ತ್ ಕೇರ್ ನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ. ಶಂಶೀರ್ ವಯಾಲಿಲ್ ಟ್ವೀಟಿಸಿದ್ದಾರೆ.

ಆಗಸ್ಟ್ 5ರಂದು ಕಂಚಿ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಜರ್ಮನಿ ತಂಡವನ್ನು 5-4 ಅಂತರದಿಂದ ರೋಚಕವಾಗಿ ಮಣಿಸಿದ್ದ ಭಾರತೀಯ ಹಾಕಿ ತಂಡವು 41 ವರ್ಷಗಳ ಬಳಿಕ ಒಲಿಂಪಿಕ್ಸ್ ಪದಕ ಜಯಿಸಿ ಇತಿಹಾಸವನ್ನು ಮರುಸೃಷ್ಟಿಸಿತ್ತು. 5-4 ಮುನ್ನಡೆಯಲ್ಲಿದ್ದ ಭಾರತವು ಅಂತಿಮ ಕ್ವಾರ್ಟರ್ ನ ಆಟ ಮುಗಿಯಲು 6 ಸೆಕೆಂಡ್ ಬಾಕಿ ಇರುವಾಗ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಎದುರಾಳಿಗೆ ಬಿಟ್ಟುಕೊಟ್ಟಿತ್ತು. ಆಗ ಗೋಲ್ ಕೀಪರ್ ಶ್ರೀಜೇಶ್ ಮತ್ತೊಮ್ಮೆ ಎದುರಾಳಿಯ ಗೋಲು ಗಳಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News