ಆಸ್ಟ್ರೇಲಿಯಾದಲ್ಲಿ ಕುಸಿದು ಬಿದ್ದ ನಂತರ ಜೀವ ರಕ್ಷಕ ವ್ಯವಸ್ಥೆಯಲ್ಲಿರುವ ಕ್ರಿಸ್ ಕೇರ್ನ್ಸ್ : ವರದಿ

Update: 2021-08-10 10:06 GMT

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದ ಕುಸಿದು ಬಿದ್ದಿರುವ ನ್ಯೂಝಿಲ್ಯಾಂಡ್ ಮಾಜಿ ಕ್ರಿಕೆಟ್ ಆಲ್ ರೌಂಡರ್ ಕ್ರಿಸ್ ಕೇರ್ನ್ಸ್ ಕ್ಯಾನ್ಬೆರಾ ಆಸ್ಪತ್ರೆಯಲ್ಲಿ ಜೀವ ರಕ್ಷಕದ ವ್ಯವಸ್ಥೆಯಲ್ಲಿದ್ದಾರೆ ಎಂದು ನ್ಯೂಝಿಲ್ಯಾಂಡ್ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 51ರ ವಯಸ್ಸಿನ ಕೇರ್ನ್ಸ್  ನಂತರ ಹಲವಾರು ಆಪರೇಶನ್ ಗಳಿಗೆ ಒಳಗಾಗಿದ್ದರು. ಆದರೆ ಆಶಿಸಿದಂತೆ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ ಎಂದು ನ್ಯೂಸ್ ಹಬ್ ವರದಿ ಮಾಡಿದೆ.

ಮಂಡಳಿಯು ಕೇರ್ನ್ಸ್ ನ ಖಾಸಗಿತನದ ಹಕ್ಕನ್ನು ಗೌರವಿಸುತ್ತಿದೆ ಮತ್ತು ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದು ನ್ಯೂಝಿಲೆಂಡ್ ಕ್ರಿಕೆಟ್ ವಕ್ತಾರರು ಹೇಳಿದರು.

ಕೇರ್ನ್ಸ್ ವಿಶೇಷವಾಗಿ ಸೀಮಿತ  ಓವರ್ ಗಳಲ್ಲಿ  ಅತ್ಯುತ್ತಮ ಆಲ್ರೌಂಡರ್‌ಗಳಲ್ಲಿ ಒಬ್ಬರಾಗಿದ್ದರು. ಅವರ ತಂದೆ ಲ್ಯಾನ್ಸ್ ಕೂಡ ಕ್ರಿಕೆಟ್ ನಲ್ಲಿ ನ್ಯೂಝಿಲ್ಯಾಂಡ್ ಅನ್ನು ಪ್ರತಿನಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News