ಮಾಜಿ ಸಚಿವ ಕೆ.ಪ್ರಭಾಕರ್ ಪತ್ನಿ ಜಯಮ್ಮ ನಿಧನ

Update: 2021-08-16 04:45 GMT

ಬೆಂಗಳೂರು, ಆ.16: ಮಾಜಿ ಸಚಿವ ದಿವಂಗತ ಕೆ.ಪ್ರಭಾಕರ್ ಅವರ ಪತ್ನಿ ಜಯಮ್ಮ ಪ್ರಭಾಕರ್(90) ಆ.15ರಂದು ತಡರಾತ್ರಿ ನಗರದ ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ.

 ವಯೋಸಹಜ ಕಾಯಿಲೆಗಾಗಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮೃತರು ಏಳು ಮಂದಿ ಮಕ್ಕಳ ಸಹಿತ ಅಪಾರ  ಬಂಧು- ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು(ಆ.16) ಮಧ್ಯಾಹ್ನ ನೆಲಮಂಗಲ ತಾಲೂಕಿನ ಗಾಂಧೀ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ