ಸರಕಾರ ರಚನೆಗೆ ಅಫ್ಘಾನ್ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿ ಜೊತೆಗೆ ತಾಲಿಬಾನ್ ಮಾತುಕತೆ

Update: 2021-08-18 17:36 GMT

ಕಾಬೂಲ್ (ಅಫ್ಘಾನಿಸ್ತಾನ), ಆ. 18: ತಾಲಿಬಾನ್ ಕಮಾಂಡರ್ ಹಾಗೂ ಭಯೋತ್ಪಾದಕ ಗುಂಪು ಹಕ್ಕಾನಿ ನೆಟ್‌ವರ್ಕ್‌ನ ಹಿರಿಯ ನಾಯಕ ಅನಸ್ ಹಕ್ಕಾನಿ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಈ ಸಭೆಯಲ್ಲಿ ಕರ್ಝಾಯಿ ಜೊತೆಗೆ ಹಿಂದಿನ ಸರಕಾರದ ಪ್ರಧಾನ ಶಾಂತಿ ರಾಯಭಾರಿ ಅಬ್ದುಲ್ಲಾ ಕೂಡ ಉಪಸ್ಥಿತರಿದ್ದರು ಎಂದು ಅವರು ಹೇಳಿದರು. ಆದರೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

ಹಕ್ಕಾನಿ ನೆಟ್‌ವರ್ಕ್ ತಾಲಿಬಾನ್‌ನ ಪ್ರಮುಖ ಘಟಕವಾಗಿದೆ.

ತಾಲಿಬಾನ್ ರವಿವಾರ ಕಾಬೂಲನ್ನು ವಶಪಡಿಸಿಕೊಂಡಿದೆ ಹಾಗೂ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪರಾರಿಯಾದ ಬಳಿಕ ದೇಶವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿದೆ.

ಹಕ್ಕಾನಿ ನೆಟ್‌ವರ್ಕ್ ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಸಕ್ರಿಯವಾಗಿದೆ ಹಾಗೂ ಅದು ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ಹಲವು ಭೀಕರ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News