ಆಹಾರ ವ್ಯರ್ಥದಿಂದ ಸೌದಿ ಅರೇಬಿಯಕ್ಕೆ ವಾರ್ಷಿಕ 10.6 ಬಿಲಿಯನ್ ಡಾಲರ್ ನಷ್ಟ

Update: 2021-08-19 15:40 GMT

ರಿಯಾದ್, ಆ.19: ಆಹಾರವನ್ನು ವ್ಯರ್ಥ ಮತ್ತು ಪೋಲು ಮಾಡುವುದರಿಂದ ಸೌದಿ ಅರೆಬಿಯಾಕ್ಕೆ ವಾರ್ಷಿಕ 10.6 ಬಿಲಿಯನ್ ಡಾಲರ್‌ನಷ್ಟು ನಷ್ಟವಾಗುತ್ತದೆ ಎಂದು ಸೌದಿ ಅರೆಬಿಯಾದ ಕೃಷಿ ಸಚಿವ, ಸೌದಿ ಧಾನ್ಯ ನಿಗಮದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಅಲ್-ಫದಿಲ್ ಹೇಳಿದ್ದಾರೆ.

ಆಹಾರ ವ್ಯರ್ಥವಾಗುವುದನ್ನು ಮತ್ತು ಇದರಿಂದ ಆರೋಗ್ಯ, ಪರಿಸರ ಮತ್ತು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದನ್ನು ತಡೆಯಲು ಅತ್ಯುನ್ನತ ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದವರು ಹೇಳಿದ್ದಾರೆ. ರಾಷ್ಟ್ರೀಯ ಪರಿವರ್ತನೆ ಉಪಕ್ರಮಕ್ಕೆ ಅನುಗುಣವಾಗಿ, ಆಹಾರ ವ್ಯರ್ಥ ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೌದಿ ಧಾನ್ಯ ನಿಗಮವು ಸ್ಥಳೀಯ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಮೂಲಗಳು ಹೇಳಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News