ಜಾತಿ ಆಧಾರಿತ ಜನಗಣತಿ: ಸರ್ವ ಪಕ್ಷ ನಿಯೋಗದೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಬಿಹಾರ ಸಿಎಂ ನಿತೀಶ್ ಕುಮಾರ್

Update: 2021-08-23 08:09 GMT

ಹೊಸದಿಲ್ಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ವಪಕ್ಷ ನಿಯೋಗವು ಸೋಮವಾರ  ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಜಾತಿ ಆಧಾರಿತ ಜನಗಣತಿ (ರಾಜ್ಯ ಹಾಗೂ  ದೇಶಾದ್ಯಂತ) ಕುರಿತು ಚರ್ಚಿಸಲು ಮತ್ತು "ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವಂತೆ" ಒತ್ತಾಯಿಸಿತು.

ಆರ್‌ಜೆಡಿ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್,  ಬಿಜೆಪಿಯ ರಾಜ್ಯ ಸಚಿವ ಜನಕ್ ರಾಮ್, ಕಾಂಗ್ರೆಸ್ ನಾಯಕ ಅಜೀತ್ ಶರ್ಮಾ ,ಎಡ ಪಕ್ಷಗಳು ಹಾಗೂ  ಮಾಜಿ ಮುಖ್ಯಮಂತ್ರಿ , ಹಿಂದುಸ್ತಾನಿ ಅವಾಮ್ ಮೋರ್ಚಾದ ಅಧ್ಯಕ್ಷ ಜಿತನ್ ರಾಮ್ ಅವರು ಮುಖ್ಯಮಂತ್ರಿಯೊಂದಿಗಿದ್ದರು.

"ಈ ವಿಷಯದಲ್ಲಿ ಬಿಹಾರ ಹಾಗೂ  ಇಡೀ ದೇಶದ ಜನರು ಒಂದೇ ಅಭಿಪ್ರಾಯವನ್ನು ಹೊಂದಿದ್ದಾರೆ. ನಮ್ಮ ಮಾತನ್ನು ಕೇಳಿದ್ದಕ್ಕಾಗಿ ನಾವು ಪ್ರಧಾನಿಗೆ ಕೃತಜ್ಞರಾಗಿರುತ್ತೇವೆ. ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ನಾವು ಅವರನ್ನು ಒತ್ತಾಯಿಸುತ್ತೇವೆ" ಎಂದು ಸಭೆಯ ನಂತರ ನಿತೀಶ್ ಕುಮಾರ್ ಹೇಳಿದರು.

ಬಿಹಾರ ಅಸೆಂಬ್ಲಿಯು ಎರಡು ಬಾರಿ ಜಾತಿ ಆಧಾರಿತ ಜನಗಣತಿಯನ್ನು ನಡೆಸುವ ನಿರ್ಣಯಗಳನ್ನು ಅಂಗೀಕರಿಸಿದೆ ಎಂದು ನಿಯೋಗವು ಪ್ರಧಾನಿಗೆ ನೆನಪಿಸಿದೆ ಎಂದು ಅವರು ಹೇಳಿದರು.

"ನಮ್ಮ ನಿಯೋಗವು ಇಂದು ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ್ದು ರಾಜ್ಯದಲ್ಲಿ  ಮಾತ್ರವಲ್ಲ ... ಇಡೀ ದೇಶದ ಜಾತಿ ಗಣತಿಗಾಗಿ. ಪ್ರಾಣಿಗಳು ಮತ್ತು ಮರಗಳನ್ನು ಎಣಿಸಬಹುದಾದರೆ, ಜನರು ... ಜಾತಿ ಗಣತಿಯು ಒಂದು ಐತಿಹಾಸಿಕ, ಬಡವರ ಪರವಾದ ಕ್ರಮವಾಗಿರುತ್ತದೆ'' ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ ಎಂದು  ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News